ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಮಕ್ಕಳು 6 ದಿನದೊಳಗೆ ಕೋವಿಡ್‌ ರೋಗಲಕ್ಷಣದಿಂದ ಚೇತರಿಕೆ: ಅಧ್ಯಯನ

Last Updated 4 ಆಗಸ್ಟ್ 2021, 8:45 IST
ಅಕ್ಷರ ಗಾತ್ರ

ಲಂಡನ್‌: ಕೋವಿಡ್‌–19 ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡ ಹೆಚ್ಚಿನ ಮಕ್ಕಳು ಆರು ದಿನಗಳೊಳಗೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್ ಚೈಲ್ಡ್ ಆ್ಯಂಡ್‌ ಆ್ಯಡೊಲೆಸೆಂಟ್‌ ಹೆಲ್ತ್‌ ಜರ್ನಲ್‌ನಲ್ಲಿ ಪ್ರಕಟವಾದ ಬ್ರಿಟನ್‌ ಅಧ್ಯಯನವೊಂದು ಹೇಳಿದೆ.

‘ಮಕ್ಕಳು ನಾಲ್ಕು ವಾರಗಳಿಗಿಂತ ಹೆಚ್ಚಿನ ಅವಧಿ ತನಕ ರೋಗಲಕ್ಷಣಗಳನ್ನು ಹೊಂದಿದ ಪ್ರಕರಣಗಳು ಅತಿ ವಿರಳವಾಗಿದೆ’ ಎಂದೂ ಅಧ್ಯಯನ ತಿಳಿಸಿದೆ.

ಪೋಷಕರು ತಮ್ಮ ಮಕ್ಕಳಲ್ಲಿ ಕಾಣಿಸಿಕೊಂಡ ಕೋವಿಡ್‌ ರೋಗಲಕ್ಷಣದ ಬಗ್ಗೆ ‘ಝೋಯಿ ಕೋವಿಡ್‌ ಸ್ಟಡಿ’ ಎಂಬ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ನಲ್ಲಿ ನೀಡಿರುವ ಮಾಹಿತಿಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಈ ಅಧ್ಯಯನದಲ್ಲಿ ಬ್ರಿಟನ್‌ನ 5 ರಿಂದ 17 ವಯಸ್ಸಿನೊಳಗಿನ 250,000 ಕ್ಕೂ ಹೆಚ್ಚು ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 2020ರ ಸೆಪ್ಟೆಂಬರ್‌ 1ರಿಂದ 2021ರ ಫೆಬ್ರುವರಿ 22ರ ನಡುವಿನ ಮಾಹಿತಿಯನ್ನು ಅಧ್ಯಯನದಲ್ಲಿ ಬಳಸಲಾಗಿದೆ.

‘ದೀರ್ಘಕಾಲದವರೆಗೆ ಕೋವಿಡ್‌ ರೋಗಲಕ್ಷಣಗಳನ್ನು ಅನುಭವಿಸಿದ ಮಕ್ಕಳ ಸಂಖ್ಯೆ ಕಡಿಮೆಯಿದೆ. ಆದರೆ ಸ್ವಲ್ಪ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ದೀರ್ಘಕಾಲದವರೆಗೆ ಕಾಣಿಸಿಕೊಂಡಿದೆ’ ಎಂದು ಅಧ್ಯಯನದ ಪ್ರಮುಖ ಲೇಖಕಿ, ಕಿಂಗ್ಸ್‌ ಕಾಲೇಜ್‌ ಲಂಡನ್‌ನ ಪ್ರೊ. ಎಮಾ ಡುಂಕಾನ್‌ ಅವರು ಮಾಹಿತಿ ನೀಡಿದರು.

‘ಕೆಲವು ವಯಸ್ಕರುಕೋವಿಡ್‌ ಬಳಿಕವೂ ದೀರ್ಘಕಾಲದ ಅನಾರೋಗ್ಯವನ್ನು ಅನುಭವಿಸುತ್ತಾರೆ. ಅವರಲ್ಲಿ ನಾಲ್ಕು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ತನಕ ಕೋವಿಡ್‌ ರೋಗಲಕ್ಷಣಗಳಿರುತ್ತವೆ. ಆದರೆ ಮಕ್ಕಳಲ್ಲೂ ಇದೇ ರೀತಿಯ ಸ್ಥಿತಿ ಅಭಿವೃದ್ಧಿಗೊಳ್ಳಬಹುದೇ ಎಂಬುದರ ಬಗ್ಗೆ ತಿಳಿದಿಲ್ಲ’ ಎಂದು ಸಂಶೋಧಕರು ಹೇಳಿದ್ದಾರೆ.

ಸಾರ್ಸ್‌–ಕೋವಿಡ್‌–2 ಸೋಂಕಿಗೆ ಒಳಗಾದ ಅನೇಕ ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೆ ಅವರು ಲಘು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೋವಿಡ್‌ ರೋಗಲಕ್ಷಣ ಕಾಣಿಸಿಕೊಂಡ ಸುಮಾರು 1,734 ಮಕ್ಕಳ ಪಿಸಿಆರ್‌ ವರದಿಯು ಪಾಸಿಟಿವ್‌ ಬಂದಿದೆ. ಆ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಅವರಲ್ಲಿ ಸೋಂಕಿನ ಲಕ್ಷಣಗಳಿದ್ದವು ಎಂದು ಅಧ್ಯಯನ ಹೇಳಿದೆ.

‘ಕೋವಿಡ್‌ ರೋಗಲಕ್ಷಣಗಳು ಕಾಣಿಸಿಕೊಂಡ ಮಕ್ಕಳು ಸರಾಸರಿ ದಿನಗಳ ಆರು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಮಕ್ಕಳು ಕೇವಲ ಮೂರು ರೋಗಲಕ್ಷಣಗಳನ್ನು ಹೊಂದಿದ್ದರು. ಹೆಚ್ಚಿನ ಮಕ್ಕಳ ನಾಲ್ಕುವಾರದೊಳಗೆಯೇ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವರು ನಾಲ್ಕು ವಾರಗಳ ಬಳಿಕವೂ ಆಯಾಸ ಮತ್ತು ವಾಸನೆ ಗ್ರಹಿಕೆ ಶಕ್ತಿಯನ್ನು ಕಳೆದುಕೊಂಡಿದ್ದರು’ ಎಂದು ಅಧ್ಯಯನ ತಿಳಿಸಿದೆ.

‘ಅಧ್ಯಯನ ಮುಕ್ತಾಯಗೊಳ್ಳುವ ಎರಡು ತಿಂಗಳ ಮುನ್ನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ 1,379 ಮಕ್ಕಳ ಪೈಕಿ ಶೇಕಡ 2 ರಷ್ಟು ಮಕ್ಕಳಲ್ಲಿ ರೋಗಲಕ್ಷಣವು 8 ವಾರಗಳಿಗಿಂತ ಹೆಚ್ಚು ಕಾಲ ಇತ್ತು. 5–11 ವರ್ಷದ ಮಕ್ಕಳಿಗಿಂತ12–17 ವಯಸ್ಸಿನ ಮಕ್ಕಳು ಹೆಚ್ಚಿನ ಕಾಲ ರೋಗಲಕ್ಷಣಗಳನ್ನು ಹೊಂದಿದ್ದರು’ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT