ಶನಿವಾರ, ಸೆಪ್ಟೆಂಬರ್ 18, 2021
24 °C

ಮಹಾರಾಷ್ಟ್ರ: ಹೆಲಿಕಾಪ್ಟರ್‌ ಬ್ಲೇಡ್‌ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಯಾವತ್‌ಮಾಳ್‌, ಮಹಾರಾಷ್ಟ್ರ: ಹೆಲಿ‍ಕಾಪ್ಟರ್‌ನ ಬ್ಲೇಡ್‌ ತಲೆ ಮೇಲೆ ಬಿದ್ದು 24 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಮಹಾರಾಷ್ಟ್ರದ ಯಾವತ್‌ಮಾಳ್‌ ಜಿಲ್ಲೆಯ ‍ಪುಲ್‌ಸವಾಂಗಿ ಗ್ರಾಮದಲ್ಲಿ ನಡೆದಿದೆ.

ಮೆಕ್ಯಾನಿಕ್‌ ಶೇಖ್‌ ಇಸ್ಮಾಯಿಲ್‌ ಶೇಖ್‌ ಇಬ್ರಾಹಿಂ ಅವರು ತಾನವು ನಿರ್ಮಿಸಿದ ಹೆಲಿಕಾಪ್ಟರ್‌ ಅನ್ನು ವರ್ಕ್‌ಶಾಪ್‌ನಲ್ಲಿ ಪರಿಶೀಲಿಸುತ್ತಿದ್ದ ವೇಳೆ ಅದರ ಬ್ಲೇಡ್‌ವೊಂದು ಅವರ ತಲೆ ಮೇಲೆ ಬಿದ್ದಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಇಬ್ರಾಹಿಂ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದರು.

ಕಳೆದ ಎರಡು ವರ್ಷಗಳಿಂದ ಇಸ್ಮಾಯಿಲ್‌ ಶೇಖ್‌ ಇಬ್ರಾಹಿಂ ಅವರು ಹೆಲಿಕಾಪ್ಟರ್‌ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು