ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್‌ ರದ್ದುಪಡಿಸಲು ಒತ್ತಾಯ

ಜಪಾನ್‌ನ ಅಸಾಹಿ ಶಿಂಭನ್‌ ದಿನಪತ್ರಿಕೆ ಸಂಪಾದಕೀಯ
Last Updated 26 ಮೇ 2021, 8:35 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್‌ ಕ್ರೀಡಾಕೂಟವನ್ನು ರದ್ದುಪಡಿಸುವಂತೆ ದಿನೇ ದಿನೇ ಒತ್ತಡ ಹೆಚ್ಚುತ್ತಿದೆ.

ಜಪಾನ್‌ನ ಅಸಾಹಿ ಶಿಂಭನ್‌ ದಿನಪತ್ರಿಕೆ ಈ ಒತ್ತಾಯಕ್ಕೆ ದನಿಗೂಡಿಸಿದೆ. ಕ್ರೀಡಾಕೂಟ ರದ್ದುಪಡಿಸುವಂತೆ ಒತ್ತಾಯಿಸಿದ ಜಪಾನ್‌ನ ಪ್ರಮುಖ ದಿನಪತ್ರಿಕೆಗಳಲ್ಲಿ ಇದು ಮೊದಲನೇಯದಾಗಿದೆ. ಹಲವು ಪ್ರಾದೇಶಿಕ ದಿನಪತ್ರಿಕೆಗಳು ಸಹ ಒಲಿಂಪಿಕ್‌ ಆಯೋಜಿಸದಂತೆ ಒತ್ತಾಯಿಸಿದ್ದವು.

‘ಈ ಬೇಸಿಗೆಯಲ್ಲಿ ಒಲಿಂಪಿಕ್‌ ಆಯೋಜಿಸುವುದು ಸಮಂಜಸವಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಬೇಸಿಗೆಯಲ್ಲಿ ನಡೆಯುವ ಕ್ರೀಡಾಕೂಟವನ್ನು ರದ್ದುಪಡಿಸುವ ಬಗ್ಗೆ ಪ್ರಧಾನಿ ಸುಗಾ ಅವರು ನಿರ್ಧಾರ ಕೈಗೊಳ್ಳಬೇಕು’ ಎಂದು ಅಸಾಹಿ ಶಿಂಭನ್‌ ದಿನಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಜೂನ್‌ ತಿಂಗಳ ಅಂತ್ಯದಲ್ಲಿ ಕ್ರೀಡಾಕೂಟದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯ ರಿಚರ್ಡ್‌ ಪೌಂಡ್‌ ತಿಳಿಸಿದ್ದಾರೆ.

ಅಸಾಹಿ ಶಿಂಭನ್‌ ಬೆಳಿಗ್ಗೆಯ ದಿನಪತ್ರಿಕೆಯು 51.6 ಲಕ್ಷ ಪ್ರಸಾರವನ್ನು ಹೊಂದಿದೆ. ಸಂಜೆ ಪತ್ರಿಕೆಯು 15.5 ಲಕ್ಷ ಪ್ರಸಾರವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT