ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಠಮಾರಿ ಹೆಂಡತಿಗೆ ಬುದ್ಧಿ ಕಲಿಸುವುದು ಹೇಗೆ? ಉಪಾಯ ಹೇಳಿ ಫಜೀತಿಗೆ ಸಿಲುಕಿದ ಸಚಿವೆ

Last Updated 17 ಫೆಬ್ರುವರಿ 2022, 14:11 IST
ಅಕ್ಷರ ಗಾತ್ರ

ನವದೆಹಲಿ: ಹಠಮಾರಿ ಹೆಂಡತಿಯರನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಹಾಗೂ ಅವರು ತಪ್ಪು ಮಾಡಿದಾಗ ಹೇಗೆ ಬುದ್ಧಿ ಕಲಿಸಬೇಕು ಎಂದು ಗಂಡಂದಿರಿಗೆ ಐಡಿಯಾ ಹೇಳಿ ಕೊಡಲು ಹೋಗಿ ಮಲೇಷಿಯಾದ ಸಚಿವೆಯೊಬ್ಬರು ಫಜೀತಿಗೆ ಸಿಲುಕಿದ್ದಾರೆ.

ಮಲೇಷಿಯಾದ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪಸಚಿವೆ ಸಿತಿ ಜೈಲಾ ಮೊಹಮ್ಮದ್ ಯುಸೂಫ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಗಂಡಸರಿಗೆ ಭಾರೀ ಐಡಿಯಾ ಹೇಳಿ ಕೊಡುವ ವಿಡಿಯೊ ಹಂಚಿಕೊಂಡಿದ್ದಾರೆ.

‘ಮಾತು ಕೇಳದ ಹಠಮಾರಿ ಹೆಂಡತಿ ಇದ್ದರೆ ಮೊದಲು ಅವಳಿಗೆ ತಿಳಿ ಹೇಳಿ, ಒಪ್ಪದಿದ್ದರೇ ಅವಳ ಜೊತೆ ಮಲಗುವುದನ್ನು ಮೂರು ದಿನ ಬಿಡಿ’ ಎಂದು ಎರಡು ನಿಮಿಷದ ವಿಡಿಯೊದಲ್ಲಿ ಸಲಹೆ ನೀಡಿದ್ದಾರೆ.

ಮುಂದುವರೆದು, ‘ಪತ್ನಿ ಜೊತೆ ನೀವು ಮೂರು ದಿನ ಮಲಗುವುದನ್ನು ಬಿಟ್ಟ ಮೇಲೆಯೂ ಮಾತು ಕೇಳದಿದ್ದರೇ ಅವಳಿಗೆ ಮೃದುವಾಗಿ ಥಳಿಸಬೇಕು. ಈ ಮೂಲಕ ಗಂಡನೊಬ್ಬನಿಗೆ ಹೆಂಡತಿ ತನಗಾಗಿ ಬದಲಾಗುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿ ಕೊಡಬೇಕು’ ಎಂದು ಉಪಾಯ ಹೇಳಿದ್ದಾರೆ.

‘ಪತ್ನಿಯರಿಗೆ ತಮ್ಮ ಗಂಡನನ್ನು ಒಲಿಸಿಕೊಳ್ಳುವ ಕಲೆ ಗೊತ್ತಿರಬೇಕು. ಗಂಡನಿಗೆ ಕೋಪ ಬಂದಾಗ ಮೊದಲು ಅವನನ್ನು ತಮ್ಮ ಬಳಿ ಮಾತನಾಡಲು ಅನುಮತಿ ಕೇಳಿ. ವಿಶ್ರಾಂತಿ ನೀಡಿ. ಪ್ರೀತಿಯಿಂದ ನೋಡಿಕೊಳ್ಳಿ. ಬಳಿಕ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ’ ಎಂದು ಕಿವಿಮಾತು ಹೇಳಿದ್ದಾರೆ.

ಸಚಿವೆಸಿತಿ ಜೈಲಾ ಮೊಹಮ್ಮದ್ ಯುಸೂಫ್ ಅವರ ಈ ನಡೆಯ ಬಗ್ಗೆ ಮಲೇಷಿಯಾದ ಮಹಿಳೆಯರಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ‘ಸಚಿವೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ.

ಮಲೇಷಿಯಾದಲ್ಲಿ ಕಳೆದ 2020–21 ರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ 9015 ಪ್ರಕರಣಗಳು ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT