ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೋಂಕಿತನ ಸಂಪರ್ಕ: ಪ್ರಮಾಣವಚನ ಸಮಾರಂಭಕ್ಕೆ ಬಾರದ ಮಲೇಷ್ಯಾ ಪ್ರಧಾನಿ

Last Updated 30 ಆಗಸ್ಟ್ 2021, 12:35 IST
ಅಕ್ಷರ ಗಾತ್ರ

ಕೌಲಾಲಂಪುರ: ಮಲೇಷ್ಯಾದ ಹೊಸ ಪ್ರಧಾನಿ ಇಸ್ಮಾಯಿಲ್ ಸಾಬ್ರಿ ಯಾಕೋಬ್ ಕೋವಿಡ್ -19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕಾರಣ, ಸೋಮವಾರ ತಮ್ಮ ಹೊಸ ಸರ್ಕಾರದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ತಪ್ಪಿಸಿಕೊಂಡರು ಎಂದು ಅವರ ಕಚೇರಿ ತಿಳಿಸಿದೆ.

ಪ್ರಧಾನಿ ಯಾಕೋಬ್ ಸ್ವಯಂ ಪ್ರತ್ಯೇಕ ವಾಸ ಆರಂಭಿಸಿದ್ದಾರೆ. ಮಂಗಳವಾರದ ಅಧಿಕೃತ ರಾಷ್ಟ್ರೀಯ ದಿನಾಚರಣೆಯಲ್ಲಿ ಅವರು ವರ್ಚುವಲ್‌ ಮೂಲಕ ಭಾಗವಹಿಸಲಿದ್ದಾರೆ ಎಂದು ಅವರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಯಾಕೋಬ್ ಅವರು ಯಾರ ಸಂಪರ್ಕಕ್ಕೆ ಬಂದಿದ್ದಾರೆ, ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆಯೇ ಮತ್ತು ಅವರು ಎಷ್ಟು ದಿನಗಳವರೆಗೆ ಸ್ವಯಂ ಪ್ರತ್ಯೇಕ ವಾಸದಲ್ಲಿರುತ್ತಾರೆ ಎನ್ನುವುದನ್ನು ಅದು ಹೇಳಿಲ್ಲ.

ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ವಿಫಲವಾದ ಕಾರಣಕ್ಕೆ ಹಿಂದಿನ ಸರ್ಕಾರ ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿತ್ತು. 18 ತಿಂಗಳಿಗಿಂತಲೂ ಕಡಿಮೆ ಅವಧಿಯ ಅಧಿಕಾರ ನಡೆಸಿದ್ದ ಹಿಂದಿನ ಪ್ರಧಾನಿ ಮುಹ್ಯಿದ್ದೀನ್ ಯಾಸಿನ್ ಆಗಸ್ಟ್ 16ರಂದು ರಾಜೀನಾಮೆ ನೀಡಿದರು. ಇಸ್ಮಾಯಿಲ್ ಆಗಸ್ಟ್ 21ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ದೇಶದಲ್ಲಿ ಆಗಸ್ಟ್ 5 ರಿಂದ ದೈನಂದಿನ ಪ್ರಕರಣಗಳು 20,000ಕ್ಕಿಂತ ಹೆಚ್ಚಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 17 ಲಕ್ಷ ದಾಟಿದೆ. ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಶೇ 62ರಷ್ಟು ವಯಸ್ಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಮಲೇಷ್ಯಾದಲ್ಲಿಕೋವಿಡ್‌ನಿಂದ 16,000ಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT