ಭಾನುವಾರ, ಜೂನ್ 13, 2021
21 °C

ಪ್ರಯಾಣ ನಿರ್ಬಂಧ: ಕುಟುಂಬದವರಿಂದ ದೂರ ಉಳಿದ ಭಾರತೀಯ ಅಮೆರಿಕನ್ನರು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ಭಾರತದ ಮೇಲೆ ಪ್ರಯಾಣ ನಿರ್ಬಂಧವನ್ನು ಹೇರಿದೆ. ಇದರಿಂದಾಗಿ ಭಾರತ ಮತ್ತು ಅಮೆರಿಕದಲ್ಲಿರುವ ಹಲವಾರು ಭಾರತೀಯರು ತಮ್ಮವರಿಂದ ದೂರ ಉಳಿಯುವಂತಾಗಿದೆ.

ಕಳೆದ ವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಭಾರತದ ಮೇಲೆ ಪ್ರಯಾಣ ನಿರ್ಬಂಧ ಹೇರಿದರು. ಇದರಿಂದಾಗಿ ಅನಿರೀಕ್ಷಿತ ಮತ್ತು ತುರ್ತು ಸಮಯದಲ್ಲಿ ಭಾರತಕ್ಕೆ ಬಂದವರು ಅಮೆರಿಕಕ್ಕೆ ವಾಪಸ್‌ ಹೋಗಲಾರದೆ ಭಾರತದಲ್ಲೇ ಇದ್ದಾರೆ. ಕೆಲ ತಾಯಂದಿರು ತಮ್ಮ ಮಗುವಿನಿಂದ ದೂರ ಉಳಿಯುವಂತಾಗಿದೆ. ಹಲವಾರು ಮಂದಿ ತಮ್ಮ ಕುಟುಂಬದಿಂದ ದೂರ ಉಳಿದಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು ಮತ್ತು ಕೆಲವರಿಗೆ ಪ್ರಯಾಣ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಅಮೆರಿಕವು ಅನಿರ್ದಿಷ್ಟ ಅವಧಿಯವರೆಗೆ ಹೇರಿರುವ ಪ್ರಯಾಣ ನಿರ್ಬಂಧದಿಂದಾಗಿ ಹಲವರು ತೊಂದರೆಗೆ ಒಳಗಾಗಿದ್ದಾರೆ.

‌‘ಅಮೆರಿಕದ ರಾಯಭಾರ ಕಚೇರಿಗಳು ಕೂಡ ಮುಚ್ಚಿವೆ. ಹಾಗಾಗಿ ನಾವು ಕೂಡ ಅನಿರ್ಧಿಷ್ಟ ಅವಧಿವರೆಗೆ ಇಲ್ಲಿಯೇ ಸಿಲುಕಿದ್ದೇವೆ’ ಎಂದು ಭಾರತೀಯ ಅಮೆರಿಕನ್ನರು ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನ ಗಂಡನ ತಂದೆಯ ಆರೋಗ್ಯ ತೀರಾ ಹದಗೆಟ್ಟಿತ್ತು. ಹಾಗಾಗಿ ಏಪ್ರಿಲ್‌ 17ರಂದು ಅವರು ಎಚ್‌–1ಬಿ ವೀಸಾದ ಮೂಲಕ ಭಾರತಕ್ಕೆ ತೆರಳಿದ್ದರು. ಅಮೆರಿಕಕ್ಕೆ ಮರಳಲು ಕೆಲವೊಂದು ಪ್ರಕ್ರಿಯೆಗಳಿವೆ. ಆದರೆ ಈಗ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮುಚ್ಚಿರುವುದರಿಂದ ಅವರಿಗೆ ಅಮೆರಿಕಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ’ ಎಂದು ನೇಹಾ ಮಹಾಜನ್‌ ಅವರು ತಿಳಿಸಿದರು.

‘ಭಾರತದಲ್ಲಿ ಸಿಲುಕಿರುವ ಭಾರತೀಯ ಅಮೆರಿಕನ್ನರನ್ನು ವಾಪಾಸು ಕರೆತರಲು ಅಮೆರಿಕ ಸರ್ಕಾರ ವ್ಯವಸ್ಥೆಯನ್ನು ಮಾಡಬೇಕು’ ಎಂದು ಭಾರತೀಯ ಅಮೆರಿಕನ್ನರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು