ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್: ಮರಿಯುಪೊಲ್‌ನಲ್ಲಿ ರಷ್ಯಾ ಪಡೆಗಳಿಂದ ಮುಂದುವರಿದ ಬಾಂಬ್ ದಾಳಿ

Last Updated 22 ಏಪ್ರಿಲ್ 2022, 16:08 IST
ಅಕ್ಷರ ಗಾತ್ರ

ಕೀವ್: ಉಕ್ರೇನಿನ ಬಂದರು ನಗರ ಮರಿಯುಪೊಲ್‌ನ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರದ ಮೇಲೆ ರಷ್ಯಾದ ಪಡೆಗಳು ಬಾಂಬ್ ದಾಳಿಯನ್ನು ಮುಂದುವರಿಸಿವೆ ಎಂದು ಉಕ್ರೇನ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅಜೋವ್‌ಸ್ಟಾಲ್‌ ಸ್ಥಾವರದ ಮೇಲೆ ರಷ್ಯಾಪಡೆಗಳು ಎಂದಿನಂತೆ ಬಾಂಬ್‌ ದಾಳಿ ನಡೆಸುತ್ತಿವೆ. ಉಕ್ರೇನ್ ಸೈನಿಕರಿಗೆ ತೊಂದರೆ ಮಾಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸುಳ್ಳು ಹೇಳುತ್ತಾರೆ. ರಷ್ಯಾ ಪಡೆಗಳು ನಿರಂತರವಾಗಿ ಶೆಲ್ ದಾಳಿ, ಬಾಂಬ್ ದಾಳಿ ನಡೆಸುತ್ತಿವೆ’ ಎಂದು ಮಾರಿಯುಪೋಲ್‌ ನಗರದ ಮೇಯರ್‌ ಸಲಹೆಗಾರ ಪೆಟ್ರೋ ಆಂಡ್ರ್ಯೂಶ್ಚೆಂಕೊ ಹೇಳಿದ್ದಾರೆ.

ಅಜೋವ್‌ಸ್ಟಾಲ್‌ ಸ್ಥಾವರದ ಮೇಲೆ ಕಳೆದ ಎರಡು ವಾರಗಳಿಂದ ರಷ್ಯಾಪಡೆಗಳು ನಿರ್ಬಂಧ ವಿಧಿಸಿವೆ ಎಂದು ಆಂಡ್ರ್ಯೂಶ್ಚೆಂಕೊ ತಿಳಿಸಿದ್ದಾರೆ.

‘ಅಜೋವ್‌ಸ್ಟಾಲ್‌ ಸ್ಥಾವರದಲ್ಲಿ ಸುಮಾರು ಎರಡು ಸಾವಿರ ಉಕ್ರೇನ್‌ ಸೈನಿಕರು ಇರುವ ಅಂದಾಜಿದೆ. ಸ್ಥಾವರದೊಳಗಿನ ಭೂಗತ ಸುರಂಗಗಳ ಸಂಪರ್ಕ ಜಾಲ ಬಳಸಿಕೊಂಡು ಉಕ್ರೇನ್‌ ಸೇನೆ ಅಂತಿಮ ಪ್ರತಿರೋಧ ತೋರುತ್ತಿದೆ’ ಎಂದು ವರದಿಯಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರ ವಶಕ್ಕೆ ಪಡೆಯಿರಿ ಎಂದು ತಮ್ಮ ಸೇನಾ ಪಡೆಗಳಿಗೆ ಪುಟಿನ್ ಗುರುವಾರ ಆದೇಶ ನೀಡಿದ್ದರು.

ರಷ್ಯಾ ಪಡೆಗಳು ಮುತ್ತಿಗೆ ಹಾಕಿರುವ ಮರಿಯುಪೊಲ್‌ನಗರದಲ್ಲಿ ಆಹಾರ, ನೀರು, ವಿದ್ಯುತ್ ಇಲ್ಲದೇ ಸಾವಿರಾರು ನಾಗರಿಕರು ಮೃತಪಟ್ಟಿರುವ ಅಂದಾಜು ಇದೆ.

ಕೀವ್‌ ಹೊರವಲಯದ ಉಪನಗರ ಬುಚಾದಲ್ಲಿ ನಡೆದಿದೆ ಎನ್ನಲಾದ ‘ನರಮೇಧ’ದ ಸಾಮೂಹಿಕ ಸಮಾಧಿಗಳು ಪತ್ತೆಯಾದಂತೆಯೇ ಮರಿಯುಪೊಲ್‌ ಬಳಿಯೂ ನಾಗರಿಕರ ಸಾಮೂಹಿಕ ಸಮಾಧಿ ಮಾಡಿರುವ ಸಾಧ್ಯತೆಗಳ ಚಿತ್ರಗಳನ್ನು ಮ್ಯಾಕ್ಸರ್‌ ಟೆಕ್ನಾಲಜಿಸ್‌ ಉಪಗ್ರಹ ಸೆರೆ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT