ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆಯಲ್ಲಿ ದಡಾರ ಉಲ್ಬಣ: 157 ಮಕ್ಕಳ ಸಾವು

ಲಸಿಕೆ ಪಡೆಯದಂತೆ ಧಾರ್ಮಿಕ ಮುಖಂಡರಿಂದ ಸಲಹೆ
Last Updated 17 ಆಗಸ್ಟ್ 2022, 13:04 IST
ಅಕ್ಷರ ಗಾತ್ರ

ಹರಾರೆ: ಜಿಂಬಾಬ್ವೆಯಲ್ಲಿ ದಡಾರ ಉಲ್ಬಣಗೊಂಡಿದ್ದು, 157 ಮಕ್ಕಳು ಮೃತಪಟ್ಟಿದ್ದಾರೆ. ದಡಾರದ ಲಸಿಕೆ ಹಾಕಿಕೊಳ್ಳದಂತೆ ಧಾರ್ಮಿಕ ಮುಖಂಡರು ಸಲಹೆ ನೀಡಿದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾಯುವಂತಾಗಿದೆ ಎಂದು ಹೇಳಲಾಗುತ್ತಿದೆ.

‘ದೇಶದ ಪೂರ್ಣಭಾಗದ ಮ್ಯಾನಿಕ್‌ಲಂಡ್‌ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಮೊದಲ ದಡಾರದ ಪ್ರಕರಣವು ಪತ್ತೆಯಾಯಿತು. ಇಲ್ಲಿಂದ ದೇಶದ ಎಲ್ಲಾ ಭಾಗಕ್ಕೆ ಹರಡಿತು. ಒಟ್ಟು 2,056 ಪ್ರಕರಣಗಳು ವರದಿಯಾಗಿವೆ. ಮೃತಪಟ್ಟ ಮಕ್ಕಳಲ್ಲಿ ಹಲವರು ದಡಾರ ಲಸಿಕೆ ಪಡೆದಿರಲಿಲ್ಲ’ ಎಂದು ವಾರ್ತಾ ಸಚಿವೆ ಮೋನಿಕಾ ಮುತ್‌ಫಂಗ್ವಾ ಹೇಳಿದರು.

‘6 ತಿಂಗಳಿಂದ 15 ವರ್ಷ ಮಕ್ಕಳಿಗೆ ಲಸಿಕೆ ನೀಡುವ ಸಾಮೂಹಿಕ ಲಸಿಕೆ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಿದೆ. ಲಸಿಕೆ ಅಭಿಯಾನಕ್ಕೆ ಸಹಕಾರ ಕೊಡುವಂತೆ ಧಾರ್ಮಿಕ ನಾಯಕರಿಗೆ ಮನವಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT