ಶುಕ್ರವಾರ, ಮಾರ್ಚ್ 31, 2023
22 °C

ಮುಂಬೈ ದಾಳಿ ಕರಾಳ ನೆನಪು ಅಚ್ಚಳಿಯದೆ ಉಳಿದಿದೆ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): 2008ರ ಮುಂಬೈ ಉಗ್ರ ದಾಳಿಯ ಕರಾಳ ನೆನಪು ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲೂ ಇನ್ನೂ ಅಚ್ಚಳಿಯದೆ ಉಳಿದಿದೆ ಎಂದು ಬೈಡನ್ ಆಡಳಿತ ಸೋಮವಾರ ಹೇಳಿದೆ.

‘ಹೋಟೆಲ್‌ ಮೇಲಿನ ದಾಳಿ, ರಕ್ತಪಾತದ ಕರಾಳ ನೆನಪುಗಳು ಇನ್ನೂ ಹಾಗೇ ಇವೆ. ಇದೇ ಕಾರಣಕ್ಕಾಗಿ ಆ ದಿನ ಹಲವು ಅಮಾಯಕ ಜೀವಗಳನ್ನು ಬಲಿಪಡೆದ ಇಡೀ ಭಯೋತ್ಪಾದಕ ಗುಂಪು ಸದೆಬಡಿಯಲು ಪಣತೊಟ್ಟಿದ್ದೇವೆ’ ಎಂದು ಅದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದೆ.

ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ವಿದೇಶಿ ಪ್ರಜೆಗಳು ಸೇರಿ 166 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು