ಶುಕ್ರವಾರ, ಆಗಸ್ಟ್ 12, 2022
25 °C
ಅಧ್ಯಕ್ಷರಾಗಿ ನೇಮಕ

ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಅವರಿಗೆ ಮತ್ತೊಂದು ದೊಡ್ಡ ಹುದ್ದೆ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಮೈಕ್ರೊಸಾಫ್ಟ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಭಾರತ ಸಂಜಾತ ಸತ್ಯ ನಾದೆಲ್ಲ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದು, ಅವರಿಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿ.

ಕಂಪನಿಯ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರು ನಾದೆಲ್ಲ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ ತಿಳಿಸಿದೆ.

ಈಗ ಕಂಪನಿಯ ಅಧ್ಯಕ್ಷರಾಗಿರುವ ಜಾನ್‌ ಡಬ್ಲ್ಯು. ಥಾಮ್ಸನ್‌ ಅವರನ್ನು ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವರು 2012ರಿಂದ 2014ರ ಅವಧಿಯಲ್ಲಿ ಮುಖ್ಯ ಸ್ವತಂತ್ರ ನಿರ್ದೇಶಕ ಆಗಿ ಕರ್ತವ್ಯ ನಿಭಾಯಿಸಿದ್ದರು.

ಆಡಳಿತ ಮಂಡಳಿಯ ಕಾರ್ಯಸೂಚಿ ಬಗ್ಗೆ ಸ್ವತಂತ್ರ ನಿರ್ದೇಶಕರ ಪರವಾಗಿ ನಿಲುವು ತಿಳಿಸುವುದು, ಸ್ವತಂತ್ರ ನಿರ್ದೇಶಕರ ಸಭೆ ಕರೆಯುವುದು, ಸಿಇಒ ಕಾರ್ಯವೈಖರಿಯ ಮೌಲ್ಯಮಾಪನ ಮಾಡುವಂತಹ ಪ್ರಮುಖ ಜವಾಬ್ದಾರಿಗಳು ಥಾಮ್ಸನ್‌ ಅವರ ಬಳಿಯೇ ಇರಲಿವೆ.

ನಾದೆಲ್ಲ ಅವರು ಅಧ್ಯಕ್ಷರಾಗಿ ಕಂಪನಿಯ ಆಡಳಿತ ಮಂಡಳಿಯ ಕಾರ್ಯಸೂಚಿಯನ್ನು ರೂಪಿಸಲಿದ್ದಾರೆ. ವ್ಯವಹಾರದ ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ಅವರು, ಸೂಕ್ತವಾದ ಅವಕಾಶಗಳನ್ನು ರೂಪಿಸಲು ಮತ್ತು ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

2014ರಲ್ಲಿ ಸ್ಟೀವ್ ಬ್ಲೇಮರ್ ಅವರು ನಿವೃತ್ತಿಯಾದ ನಂತರ ಸತ್ಯ ನಾದೆಲ್ಲ ಮೈಕ್ರೋಸಾಫ್ಟ್‌ನ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೈಕ್ರೊಸಾಫ್ಟ್‌ ಎಡ್ಜ್‌ ಬದಲಾವಣೆಗಳೊಂದಿಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು