ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜರ್‌ಬೈಜಾನ್‌: ಮಿಲಿಟರಿ ಹೆಲಿಕಾಪ್ಟರ್‌ ಪತನ, 14 ಮಂದಿ ಸಾವು

Last Updated 30 ನವೆಂಬರ್ 2021, 14:53 IST
ಅಕ್ಷರ ಗಾತ್ರ

ಬಾಕು, ಅಜರ್‌ಬೈಜಾನ್‌ (ಎಪಿ): ಅಜರ್‌ಬೈಜಾನ್‌ನಲ್ಲಿ ಮಿಲಿಟರಿ ಹೆಲಿಕಾಪ್ಟರ್‌ವೊಂದು ಮಂಗಳವಾರ ತರಬೇತಿ ವೇಳೆ ಪತನಗೊಂಡಿದ್ದರಿಂದ 14 ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಜರ್‌ಬೈಜಾನ್‌ನ ರಾಜ್ಯ ಗಡಿ ಕಾವಲು ಸೇವೆಯ ಹೆಲಿಕಾಪ್ಟರ್‌ ಮಂಗಳವಾರ ಬೆಳಿಗ್ಗೆ ತರಬೇತಿ ಮೈದಾನದಲ್ಲಿ ಹಾರಾಟ ನಡೆಸುವ ವೇಳೆ ಅಪಘಾತಕ್ಕೀಡಾಗಿದೆ ಎಂದು ಗಡಿ ಕಾವಲು ಸೇವೆ ಮತ್ತು ಅಜರ್‌ಬೈಜಾನ್‌ನ ಪ್ರಾಸಿಕ್ಯೂಟರ್‌ ಜನರಲ್‌ ಕಚೇರಿಯ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಅಪಘಾತಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಎರಡು ಸರ್ಕಾರಿ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT