ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ತಯಾರಿಸಿದ ಉಡುಪು ತೊಟ್ಟ ಪೌರ ಕಾರ್ಮಿಕರ ಮಗಳು ಥಾಯ್ಲೆಂಡ್‌ ಭುವನ ಸುಂದರಿ

Last Updated 13 ಜನವರಿ 2023, 6:18 IST
ಅಕ್ಷರ ಗಾತ್ರ

ಥಾಯ್ಲೆಂಡ್‌: ಪಾನೀಯದ ಕ್ಯಾನ್ ತೆರೆಯುವ ಪುಲ್–ಟ್ಯಾಬ್‌ಗಳಿಂದ ತಯಾರಿಸಿದ ಉಡುಪು ಧರಿಸುವ ಮೂಲಕ 2022ರ ಥಾಯ್ಲೆಂಡ್‌ನ ಭುವನ ಸುಂದರಿ, ನಟಿ ಅನ್ನಾ ಸುಯಾಂಗಾಮ್ ಇಯಾಮ್ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ.

ಈ ‌ಉಡುಪಿನಲ್ಲಿ ಅಮೂಲ್ಯವಾದ ಸ್ವರೊವಸ್ಕಿ ಡೈಮಂಡ್ ಸಹ ಅಳವಡಿಸಲಾಗಿದ್ದು, ಉಡುಪನ್ನು ‘ಹಿಡನ್ ಪ್ರೀಷಿಯಸ್ ಡೈಮಂಡ್ ಡ್ರೆಸ್’ಎಂದೂ ಕರೆಯಲಾಗಿದೆ.

ಈ ಗೌನ್‌ಗೆ ಮತ್ತೊಂದು ಪ್ರಮುಖವಾದ ಅರ್ಥವಿದೆ. ನಟಿಯ ತಂದೆ ಕಸ ಸಂಗ್ರಹಿಸುವ ಮತ್ತು ತಾಯಿ ಬೀದಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಅವರ ಶ್ರಮವನ್ನು ಈ ಮೂಲಕ ನಟಿ ಪ್ರತಿಬಿಂಬಿಸಿದ್ದಾರೆ. ‘ನನ್ನನ್ನು ‘ಗಾರ್ಬೇಜ್ ಬ್ಯೂಟಿ ಕ್ವೀನ್’ಎಂದು ಹೀಯಾಳಿಸಿದ್ದರು. ಆದರೆ, ಆ ಹೀಯಾಳಿಕೆ ನನ್ನನ್ನು ಅಮೂಲ್ಯ ರತ್ನದಂತೆ ಪ್ರಜ್ವಲಿಸುವುದರಿಂದ ತಡೆಯಲಿಲ್ಲ’ಎಂದು ಅವರು ಹೇಳಿಕೊಂಡಿದ್ದಾರೆ.

ಫ್ಯಾಶನ್ ಬ್ರಾಂಡ್ ಮುನಿರತ್ ಈ ‘ಹಿಡನ್ ಪ್ರೀಷಿಯಸ್ ಡೈಮಂಡ್ ಗೌನ್‌’ಅನ್ನು ವಿನ್ಯಾಸಗೊಳಿಸಿದೆ.

‘ನೀವು ಹುಟ್ಟಿದ ಸ್ಥಳ ಕೊಳಕಾಗಿದ್ದರೂ ನೀವು ಅಲ್ಲೇ ಕೊಳೆಯಬೇಕಿಲ್ಲ. ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸಿಕೊಳ್ಳುವ ಶಕ್ತಿ ಹೊಂದಿದ್ದೀರಿ ಎಂಬುದನ್ನು ಮನಗಾಣಿರಿ’ಎಂದು ನಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT