ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಸರಾಗ ವಿತರಣೆಗೆ ಅಜ್ಞಾತ ಸ್ಥಳದಿಂದಲೇ ಆದೇಶಿಸಿದ ಶ್ರೀಲಂಕಾ ಅಧ್ಯಕ್ಷ

Last Updated 10 ಜುಲೈ 2022, 12:47 IST
ಅಕ್ಷರ ಗಾತ್ರ

ಕೊಲಂಬೊ: ‌ಇಂಧನವಿಲ್ಲದೇ ಪರಿತಪಿಸುತ್ತಿರುವ ಶ್ರೀಲಂಕಾಕ್ಕೆ ಭಾನುವಾರ 3,700 ಮೆಟ್ರಿಕ್ ಟನ್ ಎಲ್‌ಪಿ ಗ್ಯಾಸ್ ದೊರೆತಿದ್ದು, ಅದನ್ನು ಸುಗಮವಾಗಿ ವಿತರಿಸುವಂತೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಸರ್ಕಾರದ ವಿರುದ್ಧ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಅಧ್ಯಕ್ಷ, ಪ್ರಧಾನಿಯ ಮನೆಗಳಿಗೆ ಮುತ್ತಿಗೆ ಹಾಕಲಾಗಿದೆ. ಹೀಗಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮ್ಮ ನಿವಾಸದಿಂದ ಪಲಾಯನ ಮಾಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಸುಳಿವಿಲ್ಲವಾದರೂ, ಎಲ್‌ಪಿಜಿ ವಿತರಣೆಗಾಗಿ ಅವರು ಅಜ್ಞಾತ ಸ್ಥಳದಿಂದಲೇ ಆದೇಶ ಹೊರಡಿಸಿದ್ದಾರೆ.

ಇಂದು ಮಧ್ಯಾಹ್ನ ಎಲ್‌ಪಿಜಿ ಹೊತ್ತ ಮೊದಲ ಹಡಗು ಕೆರವಲಪಿಟಿಯಕ್ಕೆ ಆಗಮಿಸುತ್ತದೆ. ಅನಿಲ ಇಳಿಸುವಿಕೆ ಮತ್ತು ವಿತರಣೆಯನ್ನು ಕೈಗೊಳ್ಳುವಂತೆ ಅಧ್ಯಕ್ಷ ರಾಜಪಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 3,740 ಮೆಟ್ರಿಕ್ ಟನ್ ಅನಿಲ ಹೊತ್ತ ಎರಡನೇ ಹಡಗು ಜುಲೈ 11 ರಂದು ಬರಲಿದೆ ಮತ್ತು 3,200 ಮೆಟ್ರಿಕ್ ಟನ್ ಅನಿಲವನ್ನು ಹೊತ್ತ ಮೂರನೇ ಹಡಗು ಜುಲೈ 15 ರಂದು ಶ್ರೀಲಂಕಾಕ್ಕೆ ತಲುಪಲಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT