ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಕ್ರಮ ಕೈಗೊಂಡರೆ ಮಂಕಿಪಾಕ್ಸ್‌ ನಿಗ್ರಹ ಸಾಧ್ಯ: ಡಬ್ಲ್ಯುಎಚ್‌ಒ

ಸೋಂಕಿನ ಹರಡುವಿಕೆ ದರ ಅಲ್ಪ ಪ್ರಮಾಣದಲ್ಲಿದೆ, ಆತಂಕ ಬೇಡ
Last Updated 27 ಮೇ 2022, 12:17 IST
ಅಕ್ಷರ ಗಾತ್ರ

ಜಿನೆವಾ (ರಾಯ್‌ಟರ್ಸ್‌): ಯುರೋಪ್‌ ಮತ್ತು ಅಮೆರಿಕದಲ್ಲಿ ಮಂಕಿಪಾಕ್ಸ್‌ ವೈರಸ್‌ ನಿಗ್ರಹಕ್ಕೆ ಆದ್ಯತೆಯ ಮೇರೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಆರೋಗ್ಯ ಏಜೆನ್ಸಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಡಬ್ಲ್ಯುಎಚ್‌ಒ ಜಾಗತಿಕ ಸಾಂಕ್ರಾಮಿಕ ರೋಗಗಳ ಪೂರ್ವಸಿದ್ಧತಾ ನಿರ್ದೇಶಕಿ ಸಿಲ್ವಿಯಾ ಬ್ರಿಯಾಂಡ್‌, ‘ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡರೆ ಮಂಕಿಪಾಕ್ಸ್‌ ರೋಗವನ್ನು ಸುಲಭವಾಗಿ ತಡೆಗಟ್ಟಬಹುದು.ರೋಗವು ಮತ್ತಷ್ಟು ವ್ಯಾಪಿಸದಂತೆ ನಿಗ್ರಹಿಸಲು ಸಾಕಷ್ಟು ಅವಕಾಶಗಳಿವೆ. ಸೋಂಕಿನ ಹರಡುವಿಕೆ ದರ ಬೇರೆ ವೈರಸ್‌ಗಳಿಗಿಂತ ಅಲ್ಪ ಪ್ರಮಾಣದಲ್ಲಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ’ಎಂದು ತಿಳಿಸಿದರು.

ಆಫ್ರಿಕಾದ ದಟ್ಟಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವಸಿಡುಬು ವರ್ಗಕ್ಕೆ ಸೇರಿದ ಮಂಕಿ ಪಾಕ್ಸ್‌ ಸಾಂಕ್ರಾಮಿಕ ರೋಗ ಯುರೋಪ್‌ ಮತ್ತು ಅಮೆರಿಕದಲ್ಲೂ ಪತ್ತೆಯಾಗುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT