ಗುರುವಾರ , ಆಗಸ್ಟ್ 11, 2022
21 °C

ಚಂದ್ರನ ಅಂಗಳದಿಂದ ಭೂಮಿಗೆ ಮರಳಲಿರುವ ಚೀನಾದ ಬಾಹ್ಯಾಕಾಶ ನೌಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ‘ಚಂದ್ರನ ಮೇಲ್ಮೈನ ಮಾದರಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವ ಬಾಹ್ಯಾಕಾಶ ನೌಕೆಯು ಅದರೊಂದಿಗೆ ಶೀಘ್ರವೇ ಭೂಮಿಗೆ ಮರಳಲಿದೆ’ ಎಂದು ಚೀನಾ ಸರ್ಕಾರವು ಗುರುವಾರ ಹೇಳಿದೆ.

ಚೀನಾವು ನವೆಂಬರ್‌ 24ರಂದು ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್‌ನ ವೆನ್‌ಚಾಂಗ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದ್ದ ಚಾಂಗ್‌ ಇ–5 ನೌಕೆಯು ಮಂಗಳವಾರ ಚಂದ್ರನ ಮೇಲೆ ಇಳಿದಿತ್ತು.

‘ಗಗನನೌಕೆಯು, ಚಂದ್ರನ ಮೇಲ್ಮೈ ಮೇಲೆ ಗುರುತಿಸಲಾಗಿದ್ದ ನಿಗದಿತ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ ಅದನ್ನು ತನ್ನಲ್ಲೇ ಶೇಖರಿಸಿಟ್ಟುಕೊಂಡಿದೆ. ಆ ಮಾದರಿಗಳನ್ನು ಮತ್ತೊಂದು ವ್ಯೋಮನೌಕೆಯ (ಕ್ಯಾಪ್ಸೂಲ್‌) ಮೂಲಕ ಭೂ ಕಕ್ಷೆಗೆ ತರಲಾಗುತ್ತದೆ’ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು