ಸೋಮವಾರ, ನವೆಂಬರ್ 30, 2020
24 °C
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ

‘ಅಧಿಕಾರ ಹಸ್ತಾಂತರಕ್ಕೆ ಸಹಕರಿಸದಿದ್ದರೆ ಕೋವಿಡ್‌ನಿಂದ ಇನ್ನಷ್ಟು ಸಾವು’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಕರಿಸದೇ, ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡಲು ಹೊರಟಿರುವ ಹೊಸ ಆಡಳಿತಕ್ಕೂ ಅಡ್ಡಿಯುಂಟು ಮಾಡಿದರೆ, ಈ ಸೋಂಕಿನಿಂದಾಗಿ ಇನ್ನೂ ಹೆಚ್ಚು ಅಮೆರಿಕನ್ನರು ಸಾಯಲಿದ್ದಾರೆ‘ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದರೆ.

ತಮ್ಮ ತವರು ಕ್ಷೇತ್ರ ಡೆಲ್‌ವೇರ್ಯಲ್ಲಿ ‘ಟ್ರಂಪ್‌ ಅವರು ಚುನಾವಣಾ ಸೋಲನ್ನು ಒಪ್ಪಿಕೊಳ್ಳದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋ ಬೈಡನ್, ‘ಆಡಳಿತ ನಡೆಸುವ ನಮ್ಮ ನಡುವೆ ಸಮನ್ವಯ ಸಮರ್ಪಕವಾಗಿರದಿದ್ದರೆ, ಇನ್ನೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗುತ್ತಾರೆ‘ ಎಂದು ಹೇಳಿದರು.

‘ಲಸಿಕೆ ಮುಖ್ಯ ನಿಜ. ಆದರೆ, ಅದನ್ನು ಜನರಿಗೆ ತಲುಪಿಸಿ, ಹಾಕಿಸಿದರೆ ಮಾತ್ರ ಪ್ರಯೋಜನವಾಗುತ್ತದೆ. ಆದ್ದರಿಂದ, ನಾವು ಲಸಿಕೆಯನ್ನು ಹೇಗೆ ಪಡೆಯುತ್ತೇವೆ ? 30 ಕೋಟಿ ಅಮೆರಿಕನ್ನರಿಗೆ ಲಸಿಕೆ ನೀಡುವುದು ಹೇಗೆ? ಲಸಿಕೆ ವಿತರಣೆಗೆ ಯಾವ ರೀತಿ ಯೋಜನೆ ರೂಪಿಸಿದ್ದೀರಿ? ಇದನ್ನು ಪೂರೈಸಲು ಇದು ಒಂದು ಬೃಹತ್ ಕಾರ್ಯಯೋಜನೆ ಸಿದ್ಧವಾಗಬೇಕು. ಅಗತ್ಯವಿರು ವವರಿಗೆ ಆದ್ಯತೆ ನೀಡಿ ಲಸಿಕೆ ಪೂರೈಸಬೇಕು. ನೀವು, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಕರಿಸಿ. ‌ವಿಶ್ವದ ಇತರ ದೇಶಗಳು ಸಹಕರಿಸುತ್ತವೆ‘ ಎಂದು ಬೈಡನ್, ಟ್ರಂಪ್‌ ಆಡಳಿತಕ್ಕೆ ಸಲಹೆ ನೀಡಿದರು.

ಅಮೆರಿಕ ಸರ್ಕಾರದ ಇಲಾಖೆಗಳು ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಆರಂಭಿಸಿವೆ. ಟ್ರಂಪ್ ನೇಮಿಸಿರುವ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ (ಜಿಎಸ್‌ಎ) ಇನ್ನೂ ನಿಯೋಜಿತ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಚುನಾಯಿತ ಪ್ರತಿನಿಧಿಗಳೆಂದು ಗುರುತಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು