ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕುಗಳಲ್ಲಿ ಕೊರೊನಾ ಸೋಂಕು ಸಾಧ್ಯತೆ

ವುಹಾನ್‌ನಲ್ಲಿ ನಡೆದ ಅಧ್ಯಯನ
Last Updated 10 ಸೆಪ್ಟೆಂಬರ್ 2020, 9:28 IST
ಅಕ್ಷರ ಗಾತ್ರ

ಬೀಜಿಂಗ್‌:ಮೊದಲ ಬಾರಿಗೆ ಕೋವಿಡ್‌ 19 ವೈರಸ್‌ ಕಾಣಿಸಿಕೊಂಡ ಚೀನಾದ ವುಹಾನ್‌ನಲ್ಲಿ ಈಗ ಹೆಚ್ಚಿನ ಪ್ರಮಾಣದ ಬೆಕ್ಕುಗಳು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆಗಳು ಕಾಣಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೌಝೋಂಗ್ ಕೃಷಿ ವಿಶ್ವವಿದ್ಯಾಲಯ ನಡೆಸಿರುವ ಈ ಸಂಶೋಧನೆಯಿಂದ ಇಂಥದ್ದೊಂದು ಮಾಹಿತಿ ಬೆಳಕಿಗೆ ಬಂದಿದೆ.

ಕೋವಿಡ್‌ 19 ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಇದ್ದ ಬೆಕ್ಕುಗಳಿಗೆ ಕೊರೊನಾ ವೈರಸ್ ಸೋಂಕು ತಗುಲುವುದಿಲ್ಲ ಎಂದು ನಂಬಲಾಗಿತ್ತು. ಆದರೆ, ಪರೀಕ್ಷೆಗೆ ಒಳಪಡಿಸಿದ ನಂತರ, ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹೊಂದಿರುವ ಬೆಕ್ಕುಗಳೂ ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ಕೃಷಿ ವಿವಿಯ ಸಂಶೋಧಕರು ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ, ವುಹಾನ್‌ನಿಂದ ವಿವಿಧ ಕಡೆಗಳಲ್ಲಿರುವ 102 ಬೆಕ್ಕುಗಳ ರಕ್ತದ ಮಾದರಿ ಜತೆಗೆ ಮೂಗು ಮತ್ತು ಗಂಟಲಿನ ದ್ರವದ ಮಾದರಿ ಸಂಗ್ರಹಿಸಿದ್ದಾರೆ.ಅದರಲ್ಲಿಮೂರು ಪ್ರಾಣಿಗಳ ಆಶ್ರಯ ತಾಣದಿಂದ 46 ಬೆಕ್ಕುಗಳು, ಐದು ಸಾಕುಪ್ರಾಣಿಗಳ ಆಸ್ಪತ್ರೆಯಿಂದ 41 ಬೆಕ್ಕುಗಳು ಮತ್ತು ಕೋವಿಡ್ 19 ಸೋಂಕಿತ ರೋಗಿಗಳಿರುವ ಮನೆಯಿಂದ 15 ಬೆಕ್ಕುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಕೋವಿಡ್ 19‌ ಸೋಂಕು ಬಾಧಿತ ಕುಟುಂಬಗಳಲ್ಲಿರುವ 15 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಆ ಬೆಕ್ಕುಗಳಲ್ಲಿ ಕೋವಿಡ್‌ 19 ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿವೆ. ಅದರಲ್ಲಿ 11 ಬೆಕ್ಕುಗಳಲ್ಲಿ ವೈರಸ್‌ ಅನ್ನು ನಿಷ್ಕ್ರಿಯಗೊಳಿಸುವ ಪ್ರತಿಕಾಯಗಳು ಇರುವುದು ಗೊತ್ತಾಗಿದೆ. ಆದರೂ, ಈ ಬೆಕ್ಕುಗಳಲ್ಲಿ ಸೋಂಕಿಗೆ ತಗುಲುವ ಅಪಾಯವಿರುವುದನ್ನೂ ಗುರುತಿಸಲಾಗಿದೆ. ಆದರೆ, ಯಾವ ಬೆಕ್ಕುಗಳಲ್ಲೂ ಕೊರೊನಾ ಸೋಂಕು ದೃಢಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT