ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಕೋವಿಡ್‌ನಿಂದ ಬಿಗಡಾಯಿಸಿದ ಆರೋಗ್ಯ ಸ್ಥಿತಿ- ಆಸ್ಪತ್ರೆಗಳು ಫುಲ್! 

ದಾದಿಯರಿಗೂ ಕೋವಿಡ್‌
Last Updated 22 ಫೆಬ್ರುವರಿ 2022, 12:22 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ನಲ್ಲಿ ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಿದ್ದು ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿ ಹೋಗಿವೆ. ಪ್ರತ್ಯೇಕ ವಾಸದ ವಾರ್ಡ್‌ಗಳು, ಆಸ್ಪತ್ರೆಯ ಆವರಣ ಜನರಿಂದ ಕಿಕ್ಕಿರಿದು ತುಂಬಿದೆ.

ಕೋವಿಡ್‌ ರೋಗಿಗಳನ್ನು ಆರೈಕೆ ಮಾಡುತ್ತಿದ್ದಕ್ವಾಂಗ್ ವಾ ಆಸ್ಪತ್ರೆಯ ಯೀ ಎಂಬ ನರ್ಸ್‌ ಇತ್ತೀಚಿಗೆ ಕೋವಿಡ್‌ಗೆ ತುತ್ತಾಗಿ ಮನೆಗೆ ತೆರಳಿದ್ದರು. ಮನೆಯಲ್ಲಿ ಅವರಿಂದ ಅವರ ತಂದೆಗೆ ಪಿಡುಗು ತಗುಲಿತ್ತು. ಇದರಿಂದ ಅವರ ತಾಯಿ ಮತ್ತು ಸಹೋದರ ಸೋಂಕಿಗೆ ಒಳಗಾಗುವ ಭೀತಿಯಲ್ಲಿದ್ದರು.

ಆಸ್ಪತ್ರೆಯಲ್ಲಿ ಪ್ರತ್ಯೇಕ ವಾಸದ ವಾರ್ಡ್‌ನಲ್ಲಿ 40 ಹಾಸಿಗೆಗಳಿವೆ. ಆದರೆ, ಅದರಲ್ಲಿ 60 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಆವರಣಗಳೂ ರೋಗಿಗಳ ಚಿಕಿತ್ಸೆಗೆ ಬಳಕೆಯಾಗುತ್ತಿವೆ. ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸಾಮಾನ್ಯ ವಾರ್ಡ್‌ಗಳಲ್ಲಿದ್ದ ರೋಗಿಗಳಿಗೆ ಕೋವಿಡ್‌ ದೃಢಪಟ್ಟಿದೆ. ಅವರಿಂದ ದಾದಿಯರಿಗೂ ಹರಡಿದೆ. ಈಗ ಅವರೆಲ್ಲ ಕೆಲಸದಿಂದ ವಿಮುಖರಾಗಿ ಮನೆ ಸೇರಿದ್ದಾರೆ.

‘ನೀವು ಹಾಸಿಗಳನ್ನು ಹೆಚ್ಚಿಸುತ್ತಿದ್ದೀರಿ, ಆದರೆ, ಚಿಕಿತ್ಸೆ ನೀಡಲು ಮಾನವ ಸಂಪನ್ಮೂಲದ ವ್ಯವಸ್ಥೆ ಮಾಡತ್ತಿಲ್ಲ.ನನ್ನ ಸಹೋದ್ಯೋಗಿಗಳು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೆ ಪರಿತಪಿಸುತ್ತಿದ್ದಾರೆ ’ ಎಂದು ನರ್ಸ್‌ ಯೀ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ನಿತ್ಯ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಫೆಬ್ರುವರಿಯಿಂದ ನಿತ್ಯ ವರದಿಯಾಗುವ ಸೋಂಕುಗಳ ಪ್ರಮಾಣ ಶೇ 70ಕ್ಕೆ ಹೆಚ್ಚಿದೆ. ಆರೋಗ್ಯ ಸ್ಥಿತಿ ಹದಗೆಟ್ಟಿರುವುದಾಗಿ ವೈದ್ಯರು ಮತ್ತು ದಾದಿಯರು ಹೇಳಿದ್ದಾರೆ.

ಕೆಲವು ಆಸ್ಪತ್ರೆಗಳಲ್ಲಿ ವೃದ್ಧರು ಹಾಸಿಗೆ ಹಿಡಿದಿದ್ದಾರೆ. ಕೆಲವರು ಚಿಕಿತ್ಸೆ ಪಡೆಯಲು ತಮ್ಮ ಮಕ್ಕಳನ್ನು ವಾಹನ ನಿಲ್ದಾಣದ ಸ್ಥಳದಲ್ಲಿ ಗಂಟೆಗಟ್ಟಲೆ ಬಿಟ್ಟು ಚಳಿ, ಮಳೆಯಲ್ಲಿ ಕಾಯುತ್ತಿರುವ ದೃಶ್ಯ ಮನಕಲುಕುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT