2021ರಲ್ಲಿ ವರ್ಷ ಮೂರು ಸಾವಿರ ವಲಸಿಗರು ನಾಪತ್ತೆ: ವಿಶ್ವಸಂಸ್ಥೆ

ಜಿನಿವಾ: ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕಾ ಸಮುದ್ರ ಮಾರ್ಗದ ಮೂಲಕ ಯೂರೋಪ್‌ಗೆ ವಲಸೆ ಹೋಗುವ ಯತ್ನದಲ್ಲಿ ಕಳೆದ ವರ್ಷ 3,000ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆಯ ವರದಿಯು ಈ ಅಂಶವನ್ನು ಉಲ್ಲೇಖಿಸಿದೆ. ಯುಎನ್‌ಎಚ್‌ಸಿಆರ್‌ನ ವಕ್ತಾರ ಶಾಬಿಯಾ ಮಂಟೂ, ‘2021ರಲ್ಲಿ ನಾಪತ್ತೆ ಆದವರ ಸಂಖ್ಯೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ’ ಎಂದರು.
‘ನಾಪತ್ತೆ ಆಗುವ ವಲಸಿಗರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.