ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ಮ್ಯೂಸಿಯಂ ಆಫ್‌ ದಿ ಫ್ಯೂಚರ್‌ ಈಗ ’ವಿಶ್ವದ ಸುಂದರ ಕಟ್ಟಡ’

Last Updated 23 ಫೆಬ್ರುವರಿ 2022, 14:11 IST
ಅಕ್ಷರ ಗಾತ್ರ

ದುಬೈ: ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡ(ಬುರ್ಜ್‌ ಖಲೀಫಾ) ಇರುವ ದುಬೈನಲ್ಲಿ ’ಮ್ಯೂಸಿಯಂ ಆಫ್‌ ದಿ ಫ್ಯೂಚರ್‌‘ ಕಟ್ಟಡ ತಲೆಎತ್ತಿದ್ದು ಇದು ಜಗತ್ತಿನ ಅತ್ಯಂತ ಸುಂದರ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬುರ್ಜ್‌ ಖಲೀಫಾದಸಮೀಪದಲ್ಲೇ ಆಕರ್ಷಣೀಯವಾದ ವೃತ್ತಾಕಾರದ ಏಳು ಅಂತಸ್ತಿನ ಈ ಕಟ್ಟಡ 77 ಮೀಟರ್‌ ಎತ್ತರ, 30,000 ಚದುರ ಮೀಟರ್‌ ಅಗಲವಿದೆ. ಈ ಮ್ಯೂಸಿಯಂನಲ್ಲಿ ಭವಿಷ್ಯದ ದೃಷ್ಟಿಕೋನ ಮತ್ತು ಮಾನವೀಯತೆಯನ್ನು ಸ್ಫೂರ್ತಿಗೊಳಿಸುವ, ಮಾನವ ಅಭಿವೃದ್ಧಿಯಲ್ಲಿ ಆವಿಷ್ಕಾರ, ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆಶಾಶ್ವತ ಪ್ರದರ್ಶನವಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರಿಗೆ ಭವಿಷ್ಯದ ಬಗ್ಗೆ ಸ್ಫೂರ್ತಿ ಪಡೆಯಲು ಮತ್ತು ಚಿಂತನ–ಮಂಥನ ನಡೆಸಲು ಮ್ಯೂಸಿಯಂನಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಂದು ಸಾವಿರ ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸಂವಾದ–ಉಪನ್ಯಾಸ ಮತ್ತು ಕಾರ್ಯಾಗಾರ ನಡೆಸಲು 345 ಜನರುಕುಳಿತುಕೊಳ್ಳಬಹುದಾದ ಸಭಾಂಗಣಗಳನ್ನು ಮ್ಯೂಸಿಯಂ ಒಳಗೊಂಡಿದೆ.

ದುಬೈ ಪ್ರಧಾನಿ, ಆಡಳಿತಗಾರ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತಾಮ್‌ ಅವರ ಭವಿಷ್ಯ ವಾಣಿಯನ್ನು ಕ್ಯಾಲಿಗ್ರಪಿ ರೂಪದಲ್ಲಿ 1024 ಅಕ್ಷರಗಳನ್ನು ಕಟ್ಟಡದ ಮೇಲೆ ಕೆತ್ತಲಾಗಿದೆ. ವಾಸ್ತುಶಿಲ್ಪಿ ಶಾನ್‌ ಕಿಲ್ಲಾ ಈ ಕಟ್ಟಡದ ವಿನ್ಯಾಸಕ. ಇದರ ನಿರ್ಮಾಣಕ್ಕೆ ಒಂಬತ್ತು ವರ್ಷ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT