ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಜಿಲ್ ಬೈಡನ್ ಅನಿರೀಕ್ಷಿತ ಭೇಟಿ: ಧೈರ್ಯಶಾಲಿ ಎಂದ ಝೆಲೆನ್‌ಸ್ಕಾ

Last Updated 9 ಮೇ 2022, 3:11 IST
ಅಕ್ಷರ ಗಾತ್ರ

ಬ್ರಾಟಿಸ್ಲಾವಾ (ಸ್ಲೊವಾಕಿಯಾ): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರು ಯುದ್ಧಪೀಡಿತ ಉಕ್ರೇನ್‌ಗೆ ಭಾನುವಾರ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಜತೆ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ತಾಯಂದಿರ ದಿನದಂದು ನಾನಿಲ್ಲಿಗೆ ಬರಬೇಕು ಅಂದುಕೊಂಡಿದ್ದೆ. ಈ ಯುದ್ಧವನ್ನು ನಿಲ್ಲಿಸಬೇಕಾಗಿದೆ. ಇದು ತುಂಬಾ ಕ್ರೂರವಾದದ್ದು. ಅಮೆರಿಕದ ಜನರು ಉಕ್ರೇನ್‌ ಜನರ ಜತೆಗಿದ್ದಾರೆ ಎಂಬುದನ್ನು ತೋರಿಸಿಕೊಡಬೇಕಾದದ್ದು ಮುಖ್ಯ ಎಂದು ನಾನು ಭಾವಿಸಿದ್ದೆ’ ಎಂದು ಹೇಳಿದ್ದಾರೆ.

ಜಿಲ್ ಬೈಡನ್ ಅವರು ಉಕ್ರೆನ್ ಮತ್ತು ಆ ದೇಶದ ಮೇಲೆ ರಷ್ಯಾ ಅತಿಕ್ರಮಣ ಆರಂಭವಾದ ಬಳಿಕ ನೆರವು ನೀಡುತ್ತಿರುವ ದೇಶಗಳಿಗೆ ‍ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ ಬೆಂಬಲ ಪ್ರದರ್ಶಿಸುವ ಸಲುವಾಗಿ ಅವರು ಈ ಪ್ರವಾಸ ಕೈಗೊಂಡಿದ್ದು, ಸ್ಲೊವಾಕಿಯಾ ಮೂಲಕ ಅವರು ಉಕ್ರೇನ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಅತಿಕ್ರಮಣ ಆರಂಭವಾದ ಬಳಿಕ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ಎಂದು ಜಿಲ್ ಬೈಡನ್ ಜತೆ ಪ್ರಯಾಣ ಕೈಗೊಂಡಿರುವ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ ಬೈಡನ್ ಭೇಟಿ ಧೈರ್ಯಶಾಲಿ ನಡೆ ಎಂದು ಬಣ್ಣಿಸಿರುವ ಝೆಲೆನ್‌ಸ್ಕಾ, ಧನ್ಯವಾದ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT