ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಗಾಂಧಿ ಬರೆದ ಪತ್ರಗಳ ಪ್ರದರ್ಶನ ಇಂದು

ಮುಂಬೈ ಕಲಾವಿದ ಜಿತೀಶ್‌ ಅವರಿಂದ ಅಪರೂಪದ ಪತ್ರಗಳ ಸಾರ್ವಜನಿಕ ಪ್ರದರ್ಶನ
Last Updated 1 ಜೂನ್ 2022, 14:30 IST
ಅಕ್ಷರ ಗಾತ್ರ

ಲಂಡನ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹಸ್ತಾಕ್ಷರವಿರುವ ವಿರಳ ಪತ್ರಗಳನ್ನು ಇಂಗ್ಲೆಂಡಿನ ದಕ್ಷಿಣ ಕರಾವಳಿಯ ಯುನಿವರ್ಸಿಟಿ ಆಫ್‌ ಸೌತ್‌ಆಪ್ಟಂನ್‌ನಲ್ಲಿಗುರುವಾರ ಸಾರ್ವಜನಿಕ ಪ್ರದರ್ಶನಕ್ಕಿಡಲಾಗುತ್ತದೆ.

ಮುಂಬೈ ಮೂಲದ ಕಲಾವಿದ ಜಿತೀಶ್ ಕಲ್ಲತ್‌ ಅವರು ಯೂನಿವರ್ಸಿಟಿಯ ಮೌಂಟ್‌ಬ್ಯಾಟನ್‌ ಸಂಬಂಧಿತ ದಾಖಲೆಗಳಲ್ಲಿದ್ದ 5 ಪತ್ರಗಳನ್ನುಸಂಗ್ರಹಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುತ್ತಿದ್ದಾರೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಘಟ್ಟ ಮತ್ತು ಭಾರತ ವಿಭಜನೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ಅವರು ಲಾರ್ಡ್‌ ಲೂಯಿಸ್‌ ಮೌಂಟ್‌ ಬ್ಯಾಟನ್‌ ಅವರೊಂದಿಗೆ ನಡೆಸಿದ ಸಂವಹನ ಕುರಿತ ಏಕೈಕ ದಾಖಲೆ ಇವುಗಳಲ್ಲಿದೆ.

‘ಭಾರತ ವಿಭಜನೆ ಘೋಷಣೆಗೆ ಒಂದು ದಿನ ಮುನ್ನ ವಿಭಜನೆಯನ್ನು ವಿರೋಧಿಸಿ ಗಾಂಧಿ ಬರೆದ ಪತ್ರಗಳಿವು’ ಎಂದು ಕಲ್ಲತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT