ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ ಹುತಾತ್ಮರಿಗೆ ನಮನ; ಉಗ್ರರ ವಿರುದ್ಧ ಹೋರಾಟಕ್ಕೆ ನೆರವು–ಅಮೆರಿಕ

Last Updated 26 ನವೆಂಬರ್ 2020, 7:16 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಅಮೆರಿಕ ಪ್ರತಿಪಾದಿಸಿದೆ. 26/11ರ ಘಟನೆಯಲ್ಲಿ ನೊಂದವರಿಗೆ ನ್ಯಾಯ ಕಲ್ಪಿಸಲು ಬದ್ಧರಾಗಿರುವುದಾಗಿಯೂ ಹೇಳಿದೆ.

ಘಟನೆ ನಡೆದು 12 ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ಕೇಲ್‌ ಬ್ರೌನ್ ಅವರು, ಅಮೆರಿಕ ಈ ವಿಷಯದಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ. ಕೃತ್ಯದಲ್ಲಿ ಆರು ಮಂದಿ ಅಮೆರಿಕನ್ನರು ಮೃತಪಟ್ಟಿದ್ದರು. ಭಾರತದ ಜೊತೆಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ ಎಂದಿದ್ದಾರೆ.

ಅಮೆರಿಕನ್ನರಾದ ಬೆನ್ ಜಿಯೊನ್ ಕ್ರೊಮನ್, ಗೇವ್ರಿಯಲ್ ಹಾಲ್ಜ್‌ಬರ್ಗ್, ಸಂದೀಪ್‌ ಜೇಸ್ವಾನಿ, ಆರ್ಯೆ ಲೀಬಿಶ್, ಅಲನ್ ಸ್ಯಾಚೆರ್, ಇವರ ಪುತ್ರಿ ನವೊಮಿ 26/11ರ ಘಟನೆಯಲ್ಲಿ ಮೃತಪಟ್ಟಿದ್ದರು. ಈ ಮಧ್ಯೆ, ಭಾರತ ಮೂಲದ ಅಮೆರಿಕನ್ನರು ಇಲ್ಲಿ ಒಟ್ಟುಗೂಡಿ ಮುಂಬೈ ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಗೌರವನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT