ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆ: ಪತ್ರಕರ್ತನ ಬಂಧನ

Last Updated 2 ಮಾರ್ಚ್ 2021, 6:40 IST
ಅಕ್ಷರ ಗಾತ್ರ

ಯಾಂಗೂನ್‌: ಮ್ಯಾನ್ಮಾರ್‌ನ ಮಿಲಿಟರಿ ಪಡೆಯು ಪತ್ರಕರ್ತಕೌಂಗ್ ಮಯಾಟ್ ಹೇಲಿಂಗ್ ಮನೆಯ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ಮಂಗಳವಾರ ಹೇಳಿದೆ.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ದದ ಪ್ರತಿಭಟನೆಯು ಸೋಮವಾರವೂ ಮುಂದುವರಿದಿದ್ದು, ಪ್ರತಿಭಟನಕಾರರನ್ನು ಚದುರಿಸಲು ಸೇನೆಯು ಜಲಫಿರಂಗಿ, ರಬ್ಬರ್‌ ಬುಲೆಟ್‌, ಅಶ್ರುವಾಯುಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ವೇಳೆ ಘಟನೆಯ ವರದಿ ಮಾಡುತ್ತಿದ್ದ ಹಲವು ಪತ್ರಕರ್ತರನ್ನು ಸೇನೆಯು ಬಂಧಿಸಿದೆ.

ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾದ (ಡಿವಿಬಿ) ವರದಿಗಾರಕೌಂಗ್ ಮಯಾಟ್ ಹೇಲಿಂಗ್, ದಕ್ಷಿಣದ ಮೈಯಿಕ್ ನಗರದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಿಂದ ಸೋಮವಾರ ಪ್ರತಿಭಟನೆಯ ನೇರ ಪ್ರಸಾರವನ್ನು ಮಾಡುತ್ತಿದ್ದರು. ಈ ವೇಳೆ ವರದಿಗಾರನ ಮನೆ ಮೇಲೆ ದಾಳಿ ಮಾಡಿದ ಭದ್ರತಾ ಸಿಬ್ಬಂದಿ, ಆತನನ್ನು ಬಂಧಿಸಿದೆ ಎಂದು ಡಿವಿಬಿಯು ಟ್ವೀಟ್‌ ಮಾಡಿದೆ.

‘ಸೇನಾ ಸಿಬ್ಬಂದಿಯು ಕೌಂಗ್ ಮಯಾಟ್‌ನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ’ ಎಂದು ಡಿವಿಬಿಯು ಹೇಳಿದೆ.

ಕೌಂಗ್ ಮಯಾಟ್‌, ಪ್ರತಿಭಟನೆ ಮತ್ತು ಪ್ರತಿಭಟನಕಾರರ ಮೇಲಾಗುತ್ತಿದ್ದ ದೌರ್ಜನ್ಯದ ದೃಶ್ಯಗಳನ್ನು ಡಿವಿಬಿಯ ಫೇಸ್‌ಬುಕ್ ಪೇಜ್‌ ಮೂಲಕ ನೇರ ‍ಪ್ರಸಾರವನ್ನು ಮಾಡುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ, ಪತ್ರಕರ್ತನ ಮನೆಯ ಮೇಲೆ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT