ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದಲ್ಲಿ ಹೊಸ ಸಾಂಕ್ರಾಮಿಕ ರೋಗ: ಉದರ ಸಮಸ್ಯೆ ಉಲ್ಬಣ

Last Updated 16 ಜೂನ್ 2022, 11:20 IST
ಅಕ್ಷರ ಗಾತ್ರ

ಸೋಲ್‌: ಈಗಾಗಲೇ ಕೊರೊನಾ ಸೋಂಕು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಉತ್ತರ ಕೊರಿಯಾದಲ್ಲಿ ಇದೀಗ ಉದರಕ್ಕೆ ಸಂಬಂಧಿಸಿದ ಹೊಸ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ.

ನೈಋತ್ಯ ಹೇಜು ನಗರದಲ್ಲಿ ಉದರಕ್ಕೆ ಸಂಬಂಧಿಸಿದ ಈ ಹೊಸ ಸಾಂಕ್ರಾಮಿಕ ಕಂಡುಬಂದಿದ್ದು, ಎಷ್ಟು ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬ ಸ್ಪಷ್ಟ ಮಾಹಿತಿಯಿಲ್ಲ. ಈ ಹೊಸ ಸಾಂಕ್ರಾಮಿಕ ಕಾಯಿಲೆಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಕಲುಷಿತ ನೀರು ಅಥವಾ ಆಹಾರ ಸೇವನೆಯಿಂದ ಎದುರಾಗುವ ಟೈಫಾಯಿಡ್, ಅತಿಸಾರ ಮತ್ತು ಕಾಲರಾ ರೀತಿಯ ಸಮಸ್ಯೆಗಳು ಕಾಣಿಸಿಕೊಳುತ್ತವೆ ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಕಳೆದ ಹಲವು ದಶಕಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಇಲ್ಲದಿರುವ ಹಾಗೂ ನೀರಿನ ಶುಚಿ ಘಟಕಗಳ ಕೊರತೆ ಇರುವ ಉತ್ತರ ಕೊರಿಯಾದಲ್ಲಿ ಇಂಥ ಕಾಯಿಲೆಗಳು ಸಾಮಾನ್ಯವಾಗಿ ಆಗಾಗ ಹರಡುತ್ತಲೇ ಇರುತ್ತದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT