ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕಡೆ ಸೇರಿ, ದಾಖಲೆ ಬರೆದ ಒಂದೆ ಹೆಸರಿನ 178 ಮಂದಿ: ಯಾವುದು ಆ ಹೆಸರು?

Last Updated 30 ಅಕ್ಟೋಬರ್ 2022, 13:23 IST
ಅಕ್ಷರ ಗಾತ್ರ

ಟೋಕಿಯೊ: 'ಹಿರೋಕಾಜು ತನಕಾ' ಎಂಬ ಹೆಸರಿನ 178 ಮಂದಿ ಜಪಾನ್‌ನ ಟೋಕಿಯೊದಲ್ಲಿ ಶನಿವಾರ ಒಂದೇ ಕಡೆ ಸೇರುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ.

ಟೋಕಿಯೊದ ಕಾರ್ಪೊರೇಟ್ ಉದ್ಯೋಗಿ, 53 ವರ್ಷದ ಹಿರೋಕಾಜು ತನಕಾ ಎಂಬುವವರು ಈ ಸಮಾವೇಶವನ್ನು ಏರ್ಪಡಿಸಿದ್ದರು.

ಈ ದಾಖಲೆಯನ್ನು ನಿರ್ಮಿಸಲು ಹಿರೋಕಾಜು ತನಕಾ ಅವರು ಎರಡು ಭಾರಿ ಪ್ರಯತ್ನ ಪಟ್ಟು ಮೂರನೇ ಬಾರಿಗೆ ಸಫಲರಾಗಿದ್ಧಾರೆ.

ಮೂರು ವರ್ಷದ ಅಂಬೆಗಾಲಿಡುವ ಮಗುವಿನಿಂದ ಹಿಡಿದು, 80 ವರ್ಷ ವಯಸ್ಸಿನವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಜೀವನದ ಎಲ್ಲಾ ಹಂತದವರೂ ದಾಖಲೆಗಾಗಿ ಸಮಾವೇಶಗೊಂಡಿದ್ದರು.

ತಮ್ಮ ಹೆಸರಿರುವ ಒಂದೇ ರೀತಿಯ ಟಿ-ಶರ್ಟ್‌ಗಳನ್ನು ಧರಿಸಿ 178 ಮಂದಿಯೂ ಐದು ನಿಮಿಷಗಳ ಕಾಲ ಥಿಯೇಟರ್‌ನಲ್ಲಿ ಒಟ್ಟಿಗೆ ಕುಳಿತುಕೊಂಡರು. ನಂತರ ಅಧಿಕಾರಿಗಳು ದಾಖಲೆಯನ್ನು ಘೋಷಿಸಿದರು. ಗಿನ್ನೆಸ್ ನಿಯಮಗಳ ಪ್ರಕಾರ ಎಲ್ಲರೂ ಒಟ್ಟಾಗಿ 5 ನಿಮಿಷ ಒಂದೇ ಕಡೆ ಇರಬೇಕಿತ್ತು.

ಹಲವು ವರ್ಷಗಳ ಕಠಿಣ ಪರಿಶ್ರಮ, ಎರಡು ವಿಫಲ ಪ್ರಯತ್ನಗಳ ನಂತರ ಹಿರೋಕಾಜು ತನಕಾ ಅವರು ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರ ಕನಸು ನನಸಾದ ಗಳಿಗೆ ಅದಾಗಿತ್ತು.

2005 ರಲ್ಲಿ ನ್ಯೂಯಾರ್ಕ್‌ನಲ್ಲಿ ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ಜಮಾಯಿಸಿದ್ದ ‘ಮಾರ್ಥಾ ಸ್ಟೀವರ್ಟ್’ ಎಂಬ ಹೆಸರಿನ 164 ಜನ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT