ಗುರುವಾರ , ಮೇ 13, 2021
22 °C
ಸ್ಪೀಕರ್ ನ್ಯಾನ್ಸಿ ಪೆಲೊಸಿ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ ಬೈಡನ್

ಅಮೆರಿಕ: 28ರಂದು ನಡೆಯುವ ಜಂಟಿ ಅಧಿವೇಶನಕ್ಕೆ ಬೈಡನ್‌ಗೆ ಆಹ್ವಾನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಇದೇ ತಿಂಗಳ 28ರಂದು ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಅಮೆರಿಕದ ಜನಪ್ರತಿನಿಧಿಗಳ‌ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಆಹ್ವಾನ ನೀಡಿದ್ದಾರೆ.

ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಇದೇ ಮೊದಲ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

‘ಸುಮಾರು 100 ದಿನಗಳ ಹಿಂದೆ, ನೀವು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ 'ಅಮೆರಿಕದ ಜನರಿಗೆ ನೆರವಾಗುವುದಾಗಿ ಪ್ರತಿಜ್ಞೆ ಮಾಡಿದ್ದಿರಿ. ನಿಮ್ಮ ಶ್ರೇಷ್ಠ ಹಾಗೂ ಐತಿಹಾಸಿಕ ನಾಯಕತ್ವದಿಂದಾಗಿ ದೇಶದಲ್ಲಿ ಒಂದಷ್ಟು ಪರಿವರ್ತನೆಯ ಭರವಸೆ ಕಾಣುತ್ತಿದೆ' ಎಂದು ಪೆಲೊಸಿ ಅವರು ಮಂಗಳವಾರ ಬೈಡನ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಇದೇ ಉತ್ಸಾಹದಲ್ಲಿ, ನಾನು ನಿಮ್ಮನ್ನು ಏಪ್ರಿಲ್ 28ರಂದು ನಡೆಯಲಿರುವ ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸುತ್ತಿದ್ದೇನೆ. ಈ ಐತಿಹಾಸಿಕ ಕ್ಷಣದಲ್ಲಿ ಭವಿಷ್ಯದ ಬೆಳವಣಿಗೆ ಮತ್ತು ಎದುರಿಸಬೇಕಾಗಿರುವ ಸವಾಲುಗಳ ಕುರಿತು ನಿಮ್ಮೊಳಗಿರುವ ಚಿಂತನೆಗಳನ್ನು ಹಂಚಿಕೊಳ್ಳಿ‘ ಎಂದು ಮನವಿ ಮಾಡಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅವರು ಪೆಲೊಸಿ ಅವರ ಆಹ್ವಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು