ಸೋಮವಾರ, ಅಕ್ಟೋಬರ್ 18, 2021
25 °C

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿಗಾಗಿ ಕ್ವಾಡ್ ನಾಯಕರ ಪ್ರತಿಜ್ಞೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆದರಿಕೆಗಳಿಗೆ ಧೃತಿಗೆಡದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದಾಗಿ ಕ್ವಾಡ್ ನಾಯಕರು ಪ್ರತಿಜ್ಞೆ ಮಾಡಿದರು.

ವಾಷಿಂಗ್ಟನ್‌ನಲ್ಲಿ ಭಾರತ–ಆಸ್ಟ್ರೇಲಿಯಾ–ಜಪಾನ್ ಮತ್ತು ಅಮೆರಿಕ ಅಗ್ರ ನಾಯಕರು ತಾಲಿಬಾನ್ ಆಡಳಿತಕ್ಕೊಳಪಟ್ಟಿರುವ ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ವಿಸ್ತರಣಾವಾದದಲ್ಲಿ ತೊಡಗಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೂ ಸಂದೇಶ ರವಾನಿಸಿದರು. 

‘ಇಂಡೋ-ಪೆಸಿಫಿಕ್ ಮತ್ತು ಅದರಾಚೆಗಿನ ಪ್ರದೇಶದಲ್ಲೂ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ನಾವು ಅಂತರರಾಷ್ಟ್ರೀಯ ಕಾನೂನುಗಳಿಗೆ ಒಳಪಟ್ಟು, ಮುಕ್ತ ಸಂಚಾರ,  ವಿವಾದಗಳ ಶಾಂತಿಯುತ ಪರಿಹಾರ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಜ್ಯಗಳ ಪ್ರಾದೇಶಿಕ ಸಮಗ್ರತೆ ರಕ್ಷಣೆಗಾಗಿ ನಿಲ್ಲುತ್ತೇವೆ’ ಎಂದು ಶೃಂಗಸಭೆಯ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕ ದೇಶಗಳು  ಸೇರಿಕೊಂಡು ಚೀನಾವನ್ನು ಎದುರಿಸಲು ನಿಟ್ಟಿನಲ್ಲಿ ರಕ್ಷಣಾ ಸಹಕಾರ ಉದ್ದೇಶದ ತ್ರಿಪಕ್ಷೀಯ ಒಕ್ಕೂಟವನ್ನು ರಚಿಸಿಕೊಂಡಿವೆ. ಆದರೆ ಕ್ವಾಡ್ ಒಕ್ಕೂಟವು ಇತ್ತೀಚೆಗೆ ಆರಂಭವಾದ ಎಯುಕೆಯುಎಸ್ ಒಕ್ಕೂಟಕ್ಕಿಂತ ಭಿನ್ನವಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವವನ್ನು ಎದುರಿಸುವ ಸೌಮ್ಯ ಕಾರ್ಯಸೂಚಿಯನ್ನು ಕ್ವಾಡ್ ಹೊಂದಿದೆ.

ಇದರ ಜೊತೆಗೆ ಕೋವಿಡ್ ಎದುರಿಸುವುದು, ಲಸಿಕೆ ಪೂರೈಸುವುದು, ಆರ್ಥಿಕತೆ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಮೂಲಸೌಕರ್ಯಗಳ ನಿರ್ಮಾಣ, ಶೈಕ್ಷಣಿಕ ಕಾರ್ಯಕ್ರಮಗಳ ಮೇಲೂ ಕೇಂದ್ರೀಕೃತವಾಗಿದೆ.

ಇನ್ನಷ್ಟು ಓದಿ...

ಭಾರತ- ಅಮೆರಿಕ ನಂಟು ಬಲವಾಗಲಿ: ಜೋ ಬೈಡನ್

ವಾಯುಮಾಲಿನ್ಯ ತಂತ್ರಜ್ಞಾನ ಸಹಭಾಗಿತ್ವಕ್ಕೆ ಭಾರತ-ಆಸ್ಟ್ರೇಲಿಯಾ ಒಪ್ಪಿಗೆ: ಮಾರಿಸನ್ ​

ಭಾರತ, ಅಮೆರಿಕವು ಪ್ರಜಾಸತ್ತಾತ್ಮಕ ನೀತಿಗಳನ್ನು ರಕ್ಷಿಸಬೇಕು: ಕಮಲಾ ಹ್ಯಾರಿಸ್ ​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು