ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಕಕ್ಷೆಯಿಂದ ಚಂದ್ರನತ್ತ ನೆಗೆದ ನಾಸಾ ಉಪಗ್ರಹ

Last Updated 4 ಜುಲೈ 2022, 16:25 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್ (ಎಪಿ): ಮೈಕ್ರೋವೇವ್‌ ಓವನ್ ಗಾತ್ರದ ನಾಸಾ ಉಪಗ್ರಹ ಸೋಮವಾರ ಭೂಮಿಯ ಕಕ್ಷೆಯಿಂದ ಕಳಚಿಕೊಂಡು ಚಂದ್ರನತ್ತ ಪಯಣ ಆರಂಭಿಸಿದೆ. ಇದು ಗಗನಯಾತ್ರಿಗಳನ್ನು ಮತ್ತೊಮ್ಮೆ ಚಂದ್ರನ ಮೇಲೈನಲ್ಲಿ ಇಳಿಸಲು ನಾಸಾದ ಪೂರ್ವಭಾವಿ ತಯಾರಿ ಆಗಿದೆ.

ಆರು ದಿನಗಳ ಹಿಂದೆ ನ್ಯೂಜಿಲೆಂಡ್‌ನ ಮಹಿಯಾ ಪೆನಿನ್ಸುಲಾರಾಕೆಟ್ ಲ್ಯಾಬ್ ಕಂಪನಿಯು ತನ್ನ ಸಣ್ಣ ಎಲೆಕ್ಟ್ರಾನ್‌ ರಾಕೆಟ್ ಮೂಲಕ ಉಡಾವಣೆ ಮಾಡಿತು. ಕನಿಷ್ಠ ಶಕ್ತಿ ಬಳಸಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಚಂದ್ರನ ತಲುಪಲು ಉಪಗ್ರಹಕ್ಕೆ ನಾಲ್ಕು ತಿಂಗಳು ಬೇಕಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಕೆಟ್ ಲ್ಯಾಬ್‌ ಸಂಸ್ಥಾಪಕ ಪೀಟರ್ ಬೆಕ್, ’ ಸಂಭ್ರಮವನ್ನು ಪದಗಳಲ್ಲಿ ಹೇಳಲು ಆಗದು. ಈ ಯೋಜನೆಗಾಗಿ ಎರಡೂವರೆ ವರ್ಷ ತೆಗೆದುಕೊಳ್ಳಬೇಕಾಯಿತು. ಇದನ್ನು ಕಾರ್ಯಗತಗೊಳಿಸಲು ಕಷ್ಟಪಡಬೇಕಾಯಿತು. ಚಂದ್ರನತ್ತ ಉಪಗ್ರಹ ಸಾಗುತ್ತಿರುವುದನ್ನು ನೋಡಬಹುದು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT