ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ನಾಸಾದ 3 ರಾಕೆಟ್‌ಗಳ ಉಡಾವಣೆಗೆ ಸಿದ್ಧತೆ

Last Updated 8 ಜೂನ್ 2022, 15:32 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ನಾಸಾ ಅಮೆರಿಕದ ಹೊರಗಿನ ಉತ್ತರ ಆಸ್ಟ್ರೇಲಿಯಾದವಾಣಿಜ್ಯ ಬಾಹ್ಯಾಕಾಶ ನೆಲೆಯಿಂದ ಇದೇ ತಿಂಗಳು ಮೊದಲ ಬಾರಿಗೆಸಂಶೋಧನಾ ರಾಕೆಟ್ ಉಡಾವಣೆ ಮಾಡಲಿದೆ.

ಉತ್ತರ ಪ್ರಾಂತ್ಯದ ಗಣಿಗಾರಿಕೆ ಪಟ್ಟಣ ನ್ಹುಲುನ್‌ಬೈ ಬಳಿಯ ದೇಶಿಯ ಮಾಲೀಕತ್ವದ ಅರ್ನ್ಹೆಮ್ ಬಾಹ್ಯಾಕಾಶ ಕೇಂದ್ರದಿಂದ ಮೂರು ಸಬ್‌ ಆರ್ಬಿಟಲ್ ಸೌಂಡಿಂಗ್ ರಾಕೆಟ್‌ಗಳನ್ನುಜೂನ್ 26, ಜುಲೈ 4 ಮತ್ತು 12ರಂದು ಉಡಾವಣೆ ಮಾಡಲಾಗುವುದು ಎಂದು ನಾಸಾ ಮತ್ತು ಉಡಾವಣಾ ನೆಲೆ ಈಕ್ವಟೋರಿಯಲ್ ಲಾಂಚ್ ಆಸ್ಟ್ರೇಲಿಯಾ ತಿಳಿಸಿದೆ.

‘ಈ ಉಡಾವಣಾನೆಲೆ ದಕ್ಷಿಣ ಗೋಳಾರ್ಧದಲ್ಲಿದ್ದು, ಸಮಭಾಜಕಕ್ಕೆ ಹತ್ತಿರದಲ್ಲಿದೆ. ಹಾಗಾಗಿ ಇದನ್ನು ಆಯ್ಕೆ ಮಾಡಲಾಗಿದೆ. ಭವಿಷ್ಯದ ವೈಜ್ಞಾನಿಕ ಕಾರ್ಯಾಚರಣೆಗಳ ಸಾಧ್ಯತೆಗಳನ್ನು ಇದು ವಿಸ್ತರಿಸುತ್ತದೆ’ ಎಂದು ವಿಜ್ಞಾನ ಮಿಷನ್ ನಿರ್ದೇಶನಾಲಯದ ನಾಸಾ ಸಹ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಕ್ವಟೋರಿಯಲ್ ಲಾಂಚ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಗ್ರೂಪ್ ಸಿಇಒ ಮೈಕೆಲ್ ಜೋನ್ಸ್ ಅವರು, ‘ಕಂಪನಿಯ ಮೊದಲ ಗ್ರಾಹಕನಾಸಾ. ಇನ್ನೂ ಒಂಬತ್ತು ರಾಕೆಟ್‌ಗಳ ಉಡಾವಣೆಗೆ ಚರ್ಚೆ ನಡೆಯುತ್ತಿದೆ. ಈ ವರ್ಷ ಕನಿಷ್ಠ ಎರಡು ಉಡಾವಣೆಗಳು, ಮುಂದಿನ ಕೆಲವು ವರ್ಷಗಳಲ್ಲಿ ವಾರ್ಷಿಕ 50ಕ್ಕೂ ಹೆಚ್ಚು ಉಡಾವಣೆಗಳನ್ನು ನಿರೀಕ್ಷಿಸಲಾಗಿದೆ’ ಎಂದರು.

ಕೆನಡಾ ವಿನ್ಯಾಸಗೊಳಿಸಿದ ಬ್ಲ್ಯಾಕ್ ಬ್ರಾಂಟ್ ಐಎಕ್ಸ್‌ ರಾಕೆಟ್‌ಗಳು12.2-ಮೀಟರ್ (40 ಅಡಿ) ಮತ್ತು 2,200 ಕಿಲೋ ಗ್ರಾಂ (4,900 ಪೌಂಡ್) ಇವೆ. ಆಲ್ಫಾ ಸೆಂಟೌರಿ ಎ ಮತ್ತು ಬಿ ನಕ್ಷತ್ರಗಳ ವ್ಯವಸ್ಥೆಗಳ ಮೇಲೆ ಗಮನ ಕೇಂದ್ರೀಕರಿಸಲಿವೆ. ಮೂರನೇ ರಾಕೆಟ್‌, ನಕ್ಷತ್ರಗಳ ನಡುವಿನ ಜಾಗದಲ್ಲಿನ ಅನಿಲಗಳು ಮತ್ತು ಕಣಗಳ ಮೋಡಗಳ ಬಗ್ಗೆ, ಅಂತರತಾರಾ ವಾಹಕದಿಂದ ಹೊರಹೊಮ್ಮುವ ಎಕ್ಸ್-ಕಿರಣಗಳ ಅಧ್ಯಯನ ನಡೆಸಲಿದೆ.

ನಾಸಾದ ಹೀಲಿಯೋಫಿಸಿಕ್ಸ್ ವಿಭಾಗದ ನಿರ್ದೇಶಕರಾದ ನಿಕಿ ಫಾಕ್ಸ್, ‘300 ಕಿ.ಮೀ‌ಗಿಂತ ಹೆಚ್ಚು ದೂರಕ್ಕೆ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದರಿಂದ ನಕ್ಷತ್ರದ ಬೆಳಕು, ಗ್ರಹದ ವಾಸಯೋಗ್ಯವನ್ನು ಮತ್ತು ಇನ್ನಿತರ ವಿಷಯಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅನ್ವೇಷಿಸಲು ನೆರವಾಗಲಿದೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT