ಸೋಮವಾರ, ಮಾರ್ಚ್ 27, 2023
32 °C

ನಾಸಾದಿಂದ ಪರೀಕ್ಷಾರ್ಥ ಬಾಹ್ಯಾಕಾಶ ನೌಕೆ ಉಡಾವಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೇಪ್‌ ಕೆನವೆರಾಲ್‌, ಫ್ಲಾರಿಡಾ: ನಾಸಾವು ಚಂದ್ರಯಾನದ ಅಂಗವಾಗಿ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್, ಆರ್ಟೆಮಿಸ್– 1 ಸ್ಪೇಸ್‌ ಲಾಂಚ್ ಸಿಸ್ಟಂನ (ಎಸ್‌ಎಲ್‌ಎಸ್‌) ಪರೀಕ್ಷಾರ್ಥ ಉಡಾವಣೆಯನ್ನು ಬುಧವಾರ ಬೆಳಿಗ್ಗೆ ನಡೆಸಿದೆ. 

ಈ ಮೂಲಕ 50 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚಂದ್ರನ ಮೇಲ್ಮೈಗೆ ತನ್ನ ಗಗನಯಾತ್ರಿಗಳನ್ನು ಕಳುಹಿಸುವ ಅಮೆರಿಕದ ಕನಸಿಗೆ ಮತ್ತಷ್ಟು ಬಲ ಬಂದಂತಾಗಿದೆ. 

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ರಾಕೆಟ್‌, ತಾನು ಹೊತ್ತೊಯ್ದಿರುವ ಸಿಬ್ಬಂದಿ ರಹಿತವಾದ ನೌಕೆಯನ್ನು ಚಂದ್ರನ ಸುತ್ತಲಿನ ವಿಶಾಲವಾದ ಕಕ್ಷೆಗೆ ಬಿಡಲಿದೆ. ಗುರಿ ಪೂರ್ಣಗೊಳಿಸಿದ ಬಳಿಕ ಭೂ ಕಕ್ಷೆಗೆ ಹಿಂತಿರುಗಲಿರುವ ಇದು ಡಿಸೆಂಬರ್‌ನಲ್ಲಿ ಪೆಸಿಫಿಕ್‌ ಸಮುದ್ರಕ್ಕೆ ಅಪ್ಪಳಿಸಲಿದೆ. 

98 ಮೀಟರ್‌ ಉದ್ದನೆಯ ಈ ರಾಕೆಟ್‌ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಾಸಾ ಕೇಂದ್ರದ ಹೊರಭಾಗದಲ್ಲಿ ಸಾಕಷ್ಟು ನಾಗರಿಕರು ಸೇರಿದ್ದರು. ನೌಕೆಯು ಬೆಂಕಿ ಉಗುಳುತ್ತಾ ಗಗನದತ್ತ ನುಗ್ಗುತ್ತಿರುವ ದೃಶ್ಯವನ್ನು ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಳ್ಳುತ್ತಿರುವುದು ಕಂಡುಬಂತು.

ಮುಂದಿನ ವರ್ಷ ನಾಸಾ, ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ನೌಕೆಯನ್ನು ಚಂದ್ರನ ಕಕ್ಷೆಗೆ ಕಳುಹಿಸುವ ಗುರಿ ಹೊಂದಿದೆ. 2025ರ ವೇಳೆಗೆ ಮಾನವರನ್ನು ಚಂದ್ರನ ಮೇಲೆ ಕಳುಹಿಸುವ ಯೋಜನೆಯೂ ಅದರದ್ದಾಗಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು