ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ನೇಪಾಳದಲ್ಲಿ ಎರಡು ಪ್ರಕರಣಗಳು ವರದಿ

Last Updated 6 ಡಿಸೆಂಬರ್ 2021, 11:22 IST
ಅಕ್ಷರ ಗಾತ್ರ

ಕಠ್ಮಂಡು: ಕೊರೊನಾವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ಎರಡು ಪ್ರಕರಣಗಳು ನೇಪಾಳದಲ್ಲಿ ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ನೇಪಾಳಕ್ಕೆ ಆಗಮಿಸಿರುವ 66 ವರ್ಷದ ವಿದೇಶಿಗ ಮತ್ತು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ 71 ವರ್ಷದ ಮತ್ತೊಬ್ಬ ವ್ಯಕ್ತಿಗೆ ಓಮೈಕ್ರಾನ್ ಇರುವುದು ಭಾನುವಾರ ದೃಢಪಟ್ಟಿದೆ ಎಂದು ಪ್ರಕಟಿಸಿದೆ. 'ಇಬ್ಬರನ್ನೂ ಸದ್ಯ ಪ್ರತ್ಯೇಕವಾಸದಲ್ಲಿ ಇರಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರು ನಿಗಾ ವಹಿಸಿದ್ದಾರೆ' ಎಂದೂ ತಿಳಿಸಿದೆ.

ಓಮೈಕ್ರಾನ್‌ ಸೋಂಕಿತರು ಯಾವ ದೇಶದವರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಅವರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿರುವ 66 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಖಚಿತಪಡಿಸಿದೆ.

ಹೊಸ ತಳಿಯ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿರುವ ಹಾಂಗ್‌ಕಾಂಗ್‌ ಮತ್ತು ಆಫ್ರಿಕಾದ ಎಂಟು ದೇಶಗಳ ಪ್ರಯಾಣಿಕರಿಗೆ ನೇಪಾಳ ಇತ್ತೀಚೆಗೆ ಪ್ರವೇಶ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT