ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಸರ್ಕಾರ ರಚನೆಯ ಹಕ್ಕು ಮಂಡಿಸಿದ ಒಲಿ, ವಿರೋಧ ಪಕ್ಷಗಳು

Last Updated 21 ಮೇ 2021, 19:50 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ವಿರೋಧ ಪಕ್ಷಗಳು ಪ್ರತ್ಯೇಕವಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿವೆ.

ಒಲಿ ಅವರು ತಮ್ಮ ಸಿಪಿಎನ್‌–ಯುಎಂಎಲ್‌ ಪಕ್ಷದ 121 ಸಂಸದರು ಮತ್ತು ಜನತಾ ಸಮಾಜವಾದಿ ಪಕ್ಷ–ನೇಪಾಳ (ಜೆಎಸ್‌ಪಿ–ಎನ್‌) ಪಕ್ಷದ 32 ಸಂಸದರ ಬೆಂಬಲ ಇದೆ ಎಂದು ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ಬಳಿ ಹಕ್ಕು ಮಂಡಿಸಿದ್ದಾರೆ.

ಇದಕ್ಕೂ ಮುನ್ನ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಅವರು ತಮಗೆ 149 ಸಂಸದರ ಬೆಂಬಲ ಇದೆ ಎಂದು ಹೇಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

ಸಿಪಿನ್‌–ಯುಎಂಎಲ್‌ ಪಕ್ಷದ ಅಧ್ಯಕ್ಷ ಒಲಿ ಅವರು ಸಂವಿಧಾನದ 76(3)ನೇ ವಿಧಿ ಪ್ರಕಾರ ಮೇ 14ರಂದು ನೇಪಾಳದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಕ್ಕೂ ನಾಲ್ಕು ದಿನ ಮುನ್ನವಷ್ಟೇ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು.

ಅವರು 30 ದಿನದೊಳಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಮತ್ತೆ ಸದನದಲ್ಲಿ ಈ ಪರೀಕ್ಷೆ ಎದುರಿಸುವ ಒಲವನ್ನು ಅವರು ತೋರಿರಲಿಲ್ಲ.

ಹೀಗಾಗಿ ಅಧ್ಯಕ್ಷೆ ವಿದ್ಯಾದೇವಿ ಅವರು ಇತರ ರಾಜಕೀಯ ಪಕ್ಷಗಳಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ಅವಕಾಶ ನೀಡಿದ್ದರು. ಇದಕ್ಕಾಗಿ ಶುಕ್ರವಾರ ಸಂಜೆ 5ರವರೆಗೆ ಗಡುವು ನಿಗದಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT