ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಸೋತ ಒಲಿ: ನೇಪಾಳ ಸರ್ಕಾರ ಪದಚ್ಯುತಿ

Last Updated 10 ಮೇ 2021, 17:05 IST
ಅಕ್ಷರ ಗಾತ್ರ

ಕಾಠ್ಮಂಡು: ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಅವರ ಸರ್ಕಾರ ಪದಚ್ಯುತಗೊಂಡಿದ್ದು, ಅವರು ವಿಶ್ವಾಸಮತ ಕಳೆದುಕೊಂಡಿದ್ದಾರೆ. ಪುಷ್ಪಕಮಲ್‌ ದಾಹಲ್‌ ನೇತೃತ್ವದ ಸಿಪಿಎನ್‌ (ಮಾವೋವಾದಿ ಕೇಂದ್ರ) ಬೆಂಬಲ ಹಿಂತೆಗೆದುಕೊಂಡ ನಂತರ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು.

ವಿಶ್ವಾಸಮತ ಸಾಬೀತುಪಡಿಸಲು ರಾಷ್ಟ್ರಪತಿಬಿದ್ಯಾದೇವಿ ಭಂಡಾರಿ ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದರು. ಕೇವಲ 93 ಸದಸ್ಯ ಬೆಂಬಲ ಪಡೆಯಲಷ್ಟೇ ಪ್ರಧಾನಿ ಅಲಿ ಶಕ್ತರಾದರು.

275 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಕನಿಷ್ಠ 136 ಮತಗಳು ಅಗತ್ಯವಿತ್ತು. ನಾಲ್ಕು ಸದಸ್ಯರು ಅಮಾನತ್ತಿನಲ್ಲಿ ಇದ್ದು, 124 ಸದಸ್ಯರು ಒಲಿ ಸರ್ಕಾರದ ವಿರುದ್ಧ ಮತ ಚಲಾಯಿಸಿದರು.

ಆಡಳಿತರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ (ಎನ್‌ಸಿಪಿ)ಯಲ್ಲಿ ಅಧಿಕಾರಕ್ಕೆ ಸಂಘರ್ಷ ಆರಂಭವಾದ ಹಿಂದೆಯೇ, ಪ್ರಧಾನಿ ಒಲಿ ಅವರ ಶಿಫಾರಸಿನಂತೆ ಕಳೆದ ಡಿಸೆಂಬರ್‌ 20ರಂದು ರಾಷ್ಟ್ರಪತಿಸಂಸತ್ತನ್ನು ವಿಸರ್ಜಿಸಿದ್ದು, ಹೊಸದಾಗಿ ಚುನಾವಣೆಗೆ ಆದೇಶಿಸಿದ್ದರು. ಇದರೊಂದಿಗೆ ದೇಶದಲ್ಲಿ ರಾಜಕೀಯ ಅನಿಶ್ಚಿತತೆಯೂ ಶುರುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT