ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: 9 ತಿಂಗಳ ಬಳಿಕ ತೆರೆದ ಪಶುಪತಿನಾಥ ದೇವಾಲಯ

ಕೋವಿಡ್ ಸುರಕ್ಷಾ ಪಾಲನೆಯೊಂದಿಗೆ ದೇಗುಲಕ್ಕೆ ಭಕ್ತರ ಪ್ರವೇಶ
Last Updated 16 ಡಿಸೆಂಬರ್ 2020, 14:39 IST
ಅಕ್ಷರ ಗಾತ್ರ

ಕಠ್ಮಂಡು: ಕೋವಿಡ್‌–19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ 9 ತಿಂಗಳಿನಿಂದ ಮುಚ್ಚಲಾಗಿದ್ದ ಇಲ್ಲಿನ ಪ್ರಸಿದ್ಧ ಪಶುಪತಿನಾಥ ಹಿಂದೂ ದೇವಾಲಯವನ್ನು ಭಕ್ತರ ದರ್ಶನಕ್ಕಾಗಿ ಬುಧವಾರ ತೆರೆಯಲಾಯಿತು.

9 ತಿಂಗಳಿನಿಂದ ದೇವಾಲಯದ ಬಾಗಿಲು ಮುಚ್ಚಿದ್ದಕ್ಕಾಗಿ ದೇವರಿಗೆ ಕ್ಷಮೆ ಕೋರಿ ಮಂಗಳವಾರ ದೇವಾಲಯದ ಪ್ರವೇಶದ್ವಾರದಲ್ಲಿ ಪ್ರಾಯಶ್ಚಿತ್ತ ಪೂಜೆಯನ್ನು ನಡೆಸಲಾಯಿತು.

ಪಶುಪತಿನಾಥ ದೇವಾಲಯವು ನೇಪಾಳದ ಅತಿದೊಡ್ಡ ದೇವಾಲಯ ಸಂಕೀರ್ಣವಾಗಿದ್ದು, ಬಾಗಮತಿ ನದಿಯ ಎರಡೂ ಬದಿಯಲ್ಲಿ ವ್ಯಾಪಿಸಿದೆ. ಭಾರತ ಮತ್ತು ನೇಪಾಳದಿಂದ ನಿತ್ಯವೂ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

‘ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದೇವಾಲಯದ ಬಾಗಿಲನ್ನು ತೆರೆಯಲಾಗಿದೆ’ ಎಂದು ಪಶುಪತಿ ದೇವಾಲಯದ ಟ್ರಸ್ಟ್‌ನ ಪ್ರದೀಪ್ ಧಾಕಲ್ ತಿಳಿಸಿದ್ದಾರೆ.

‘ಪ್ರವಾಸಿಗರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆಯಾದರೂ, ವಿಶೇಷ ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸದ್ಯಕ್ಕೆ ನಡೆಸಲಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ನೇಪಾಳ ಸರ್ಕಾರ ಈ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT