ಶನಿವಾರ, ಡಿಸೆಂಬರ್ 4, 2021
23 °C

ಕಮಲಾ ಹ್ಯಾರಿಸ್‌ ಸಾಧನೆ ಪರಿಚಯಿಸುವ ಕೃತಿ ಬಿಡುಗಡೆಗೆ ಸಿದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದ ಕಮಲಾ ಹ್ಯಾರಿಸ್‌ ಅವರ ಅದ್ಭುತ ಕಥನವನ್ನು ಹಿರಿಯ ಪತ್ರಕರ್ತ ಚಿದಾನಂದ ರಾಜ್‌ಘಟ್ಟ ಅವರ ಹೊಸ ಪುಸ್ತಕವೊಂದು ತೆರೆದಿಟ್ಟಿದೆ.

ಕಮಲಾ ಅವರು ಅಮೆರಿಕದ ಉನ್ನತ ಸ್ಥಾನಕ್ಕೇರಿದ ಪರಿಯನ್ನು ವಿವರಿಸುವ ‘ಕಮಲಾ ಹ್ಯಾರಿಸ್‌: ಫೆನೋಮಿನಲ್‌ ವುಮನ್‌’ ಪುಸ್ತಕ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಕಮಲಾ ದೇವಿ ಹ್ಯಾರಿಸ್‌ ಅವರ ಹೆಸರಿನ ಮಧ್ಯದ ಪದ ದೇವಿಗೂ ಮುನ್ನ ಅವರ ಜನನದ ನಂತರ ‘ಅಯ್ಯರ್‌’ ಎಂಬ ಹೆಸರಿತ್ತು. ಅರ್ಥಶಾಸ್ತ್ರಜ್ಞರಾದ ಮೇಘನಾದ ದೇಸಾಯಿ, ಅಮರ್ತ್ಯ ಸೇನ್‌ ಮತ್ತು ಅಜಿತ್‌ ಸಿಂಗ್‌ ಹಾಗೂ ಮಾಜಿ ‍ಪ್ರಧಾನಿ ಮನಮೋಹನ ಸಿಂಗ್‌ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಮಲಾ ಹ್ಯಾರಿಸ್‌ ಅವರ ತಂದೆ ತಾಯಿಗಳ ಸ್ನೇಹಿತರಾಗಿದ್ದರು ಎಂದು ಲೇಖಕರು ಪುಸ್ತಕದಲ್ಲಿ ಹೇಳಿದ್ದಾರೆ.  

ಹಾರ್ಪರ್‌ ಕೊಲ್ಲಿನ್ಸ್‌ ಇಂಡಿಯಾ ಸಂಸ್ಥೆಯು ಪ್ರಕಟಿಸಿದ ಪುಸ್ತಕವು 300 ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. 

‘ಇದು ಒಂದು ಜೀವನಚರಿತ್ರೆಯಾದರೂ ಭಾರತೀಯ ಅಮೆರಿಕನ್‌ ಸಮುದಾಯದ ಇತಿಹಾಸವನ್ನು ಪರಿಚಯಿಸುತ್ತದೆ. ಅಲ್ಲಿನ ವರ್ಣನೀತಿಯ ಬಗ್ಗೆಯೂ ಸೂಕ್ಷ್ಮವಾಗಿ ಹೇಳಲಾಗಿದೆ. ಅಮೆರಿಕದ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಲಾಗಿದೆ’ ಎಂದು ರಾಜ್‌ಘಟ್ಟ ಅವರು ಪುಸ್ತಕದಲ್ಲಿ ಬರೆದಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು