ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ಹೊಸ ತಳಿ ಇಂಗ್ಲೆಂಡ್‌ನಲ್ಲಿ ಪತ್ತೆ

Last Updated 19 ಅಕ್ಟೋಬರ್ 2021, 16:19 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ಹೊಸ ತಳಿ ‘ಎ.ವೈ.4.2’ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

‘ಎ.ವೈ.4.2’ ರೂಪಾಂತರವು ಕೋವಿಡ್–19 ಸೋಂಕಿಗೆ ಕಾರಣವಾಗುವ ವೈರಸ್‌ನ ಪ್ರಬಲ ತಳಿಯಾಗಿದೆ. ಇದರಿಂದಾಗಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಆದರೆ, ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಗೆ ಈ ರೂಪಾಂತರ ಕಾರಣ ಎನ್ನಲಾಗದು ಎಂದು ತಜ್ಞರು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಜುಲೈ ನಂತರ ಇದೇ ಮೊದಲ ಬಾರಿಗೆ ಸೋಮವಾರ ದಿನವೊಂದರಲ್ಲಿ 49,156 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು.

‘ಡೆಲ್ಟಾ ರೂಪಾಂತರದ ಹೊಸ ತಳಿಯನ್ನು ನಿಯಮಿತವಾಗಿ ಪತ್ತೆಮಾಡಲಾಗುತ್ತಿದೆ ಮತ್ತು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈ ಪೈಕಿ ಇತ್ತೀಚೆಗೆ ‘ಎ.ವೈ.4.2’ ಪತ್ತೆಯಾಗಿದೆ’ ಎಂದು ಬ್ರಿಟನ್ ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT