ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಓಮೈಕ್ರಾನ್‌ನ ಉಪತಳಿ ಅಬ್ಬರ: ಕೋವಿಡ್ ಪ್ರಕರಣಗಳು ಹೆಚ್ಚಳ

Last Updated 4 ಮೇ 2022, 4:23 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: ವೇಗವಾಗಿ ಹರಡುವ ಓಮೈಕ್ರಾನ್‌ನ ಉಪತಳಿಯಿಂದಾಗಿ ಅಮೆರಿಕದಲ್ಲಿ ಕೋವಿಡ್ -19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ.

ಬಿಎ.2.12.1 ಎಂದು ಕರೆಯಲ್ಪಡುವ ಓಮೈಕ್ರಾನ್‌ನ ಹೊಸ ರೂಪಾಂತರ ಉಪತಳಿ ಏಪ್ರಿಲ್ 30 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಶೇಕಡ 36.5ರಷ್ಟು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು(ಸಿಡಿಸಿ) ಹೇಳಿಕೆ ಬಿಡುಗಡೆ ಮಾಡಿದೆ.

ವಾರದ ಮೊದಲು ಶೇಕಡ 26.6 ರಷ್ಟು ಮತ್ತು ಎರಡು ವಾರಗಳ ಮೊದಲು ಶೇಕಡ 16.7 ರಷ್ಟು ಪ್ರಕರಣಗಳ ಹೆಚ್ಚಳ ದಾಖಲಾಗಿವೆ ಎಂದು ಸಿಡಿಸಿ ದತ್ತಾಂಶದಿಂದ ತಿಳಿದುಬಂದಿದೆ.

ಈಶಾನ್ಯ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಇತರ ಕಡೆಗಳಿಗಿಂತ ಹೆಚ್ಚು ಓಮೈಕ್ರಾನ್‌ನ ಬಿಎ.2.12.1 ಪ್ರಕರಣಗಳು ದಾಖಲಾಗುತ್ತಿವೆ. ಏಪ್ರಿಲ್ ಮಧ್ಯಭಾಗದಲ್ಲಿ ಓಮೈಕ್ರಾನ್‌ನ ಉಪ ತಳಿ ಹೊರಹೊಮ್ಮುತ್ತಿರುವುದನ್ನು ಅಲ್ಲಿ ಆರೋಗ್ಯ ಇಲಾಖೆ ಘೋಷಿಸಿತ್ತು.

ಬಿಎ.2.12.1 ಅತ್ಯಂತ ಅಪಾಯಕಾರಿ ರೂಪಾಂತರ ಎಂದು ಇಲಾಖೆ ಹೇಳಿದೆ.

ಬಿಎ.2.12.1 ಉಪತಳಿಯು ಓಮೈಕ್ರಾನ್‌ನ ಬಿಎ.2 ಉಪತಳಿಗಳಿಗಿಂತಲೂ ಸುಮಾರು ಶೇಕಡ 25 ರಷ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯ ಹೊಂದಿದೆ ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್‌ಸ್ಕಿ ಹೇಳಿದ್ದಾರೆ, ಲಸಿಕೆ ಪಡೆದವರ ಮೇಲೆ ಬಿಎ.2.12.1 ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚುವರಿ ಮೌಲ್ಯಮಾಪನವು ನಡೆಯುತ್ತಿದೆ ಎಂದು ಅದು ಹೇಳಿದೆ.

ಬಿಎ 2.12.1 ಜೊತೆಗೆ, ಒಂದು ಜೋಡಿ ಹೊಸ ಓಮೈಕ್ರಾನ್ ಉಪತಳಿಗಳು ಹೊರಹೊಮ್ಮಿವೆ. ಇವು ಹಿಂದಿನ ಓಮೈಕ್ರಾನ್ ತಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರುಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಿವೆ.

ಕಳೆದ ಎರಡು ವಾರಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಾರದ ಕೋವಿಡ್-19 ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾದ ಕಾರಣ, ಬಿಎ. 4 ಮತ್ತು ಬಿಎ.5 ಉಪತಳಿಗಳು ಹೆಚ್ಚು ವಿಶ್ಚದ ಗಮನ ಸೆಳೆದಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಎ.4 ಮತ್ತು ಬಿಎ.5 ರೂಪಾಂತರಗಳಿಂದ ಪ್ರಕರಣಗಳ ತ್ವರಿತ ಹೆಚ್ಚಳದ ಬಳಿಕ ಅಮೆರಿಕದ ಆರೋಗ್ಯ ತಜ್ಞರಲ್ಲೂ ಕಳವಳ ಹೆಚ್ಚಾಗಿದೆ.

ಬಿಎ.4 ಮತ್ತು ಬಿಎ.5 ಬಿಎ.1 ಉಪತಳಿಗಳು ಬಿಎ.2ಗಿಂತ ಹೆಚ್ಚು ಸಾಂಕ್ರಾಮಿಕವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಮೀರಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿವೆ’ಎಂದು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಅಧ್ಯಕ್ಷ ಜಾಂಗ್ ಜುಫೆಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT