ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕ್ಯಾನ್ಸರ್‌ ಸಾವು ಪ್ರಮಾಣ ತಗ್ಗಿಸಲು ಹೊಸ ಯೋಜನೆ

Last Updated 13 ಸೆಪ್ಟೆಂಬರ್ 2022, 12:39 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಕ್ಯಾನ್ಸರ್‌ ಸಂಬಂಧಿ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನುಅಧ್ಯಕ್ಷ ಜೋ ಬೈಡನ್‌ ಘೋಷಿಸಿದರು.

ಎಆರ್‌ಪಿಎ–ಎಚ್‌ (ಆರೋಗ್ಯಕ್ಕಾಗಿ ಸುಧಾರಿತ ಸಂಶೋಧನಾ ಯೋಜನಾ ಕೇಂದ್ರ) ನಿರ್ಮಿಸುವುದಾಗಿ ಬೋಸ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಹೇಳಿದರು. ‘ಕ್ಯಾನ್ಸರ್‌ ರೋಗಿಗಳ ಜೀವಿತಾವಧಿ ಹೆಚ್ಚಿಸುವಂಥ ಮತ್ತು ರೋಗಿಗಳ ಪ್ರಾಣ ಉಳಿಸುವಂಥ ಹಲವಾರು ವೈದ್ಯಕೀಯ ಕ್ರಮಗಳನ್ನು ಕೈಗೊಂಡ ಬಳಿಕವೂ ಅಮೆರಿಕದಲ್ಲಿ ಜನರು ಸಾವಿಗೀಡಾಗುವುದಕ್ಕೆ ಕ್ಯಾನ್ಸರ್‌ ಎರಡನೇ ಕಾರಣವಾಗಿದೆ. ಹಲವಾರು ಕ್ಯಾನ್ಸರ್‌ ರೋಗಿಗಳು ಮತ್ತು ಅವರ ಕುಟುಂಬಕ್ಕೆ ಭರವಸೆ ಬದಲು ಆತಂಕವಿದೆ’ ಎಂದು ಬೈಡನ್‌ ಹೇಳಿದರು.

ಕ್ಯಾನ್ಸರ್‌, ಮಧುಮೇಹ ಮತ್ತು ಇತರ ಕಾಯಿಲೆಗಳು ವ್ಯಕ್ತಿಗೆ ಬರುವುದಕ್ಕೂ ಮೊದಲೇ ಅದನ್ನು ಪತ್ತೆಮಾಡಿ, ಅದನ್ನು ತಡೆಯುವ ಮತ್ತು ಚಿಕಿತ್ಸೆ ನೀಡುವ ಉದ್ದೇಶವನ್ನು ಎಆರ್‌ಪಿಎ–ಎಚ್‌ ಹೊಂದಿದೆ ಎಂದು ಅವರು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT