ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌: ‘ವ್ಯಾಕ್ಸಾಥಾನ್‘ ಅಭಿಯಾನಕ್ಕೆ ಉತ್ತಮ ಸ್ಪಂದನೆ’

Last Updated 16 ಅಕ್ಟೋಬರ್ 2021, 10:27 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವ್ಯಾಕ್ಸಾಥಾನ್‌’ ಹೆಸರಿನ ‘ಲಸಿಕಾ ಉತ್ಸವ‘ದಲ್ಲಿ ನ್ಯೂಜಿಲೆಂಡ್‌ನ ಆರೋಗ್ಯ ಕಾರ್ಯಕರ್ತರು ಶನಿವಾರ ದಾಖಲೆ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆಗಳನ್ನು ನೀಡಿದರು.

ಸತತ ಎಂಟು ಗಂಟೆಗಳ ಕಾಲ ದೂರದರ್ಶನ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಪ್ರಸಾರವಾದ ಈ ‘ವ್ಯಾಕ್ಸಾಥಾನ್‌’ನಲ್ಲಿ ಖ್ಯಾತ ಸಂಗೀತಗಾರರು, ಕ್ರೀಡಾ ತಾರೆಯರು ಮತ್ತು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮ ಆರಂಭವಾದ ನಂತರ ಮಧ್ಯಾಹ್ನದ ವೇಳೆಗೆ 1.20 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಪ್ರತಿ ನಿತ್ಯ ಸರಾಸರಿ 93 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದರು. ಈ ಉತ್ಸವದ ಮೂಲಕ ನಿತ್ಯ ಲಸಿಕೆ ಪಡೆಯುವ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಲಸಿಕಾ ಉತ್ಸವ ಸಂಜೆಯವರೆಗೂ ಮುಂದುವರಿಯಿತು.

ಪ್ರಧಾನ ಮಂತ್ರಿ ಜೆಸಿಂಡ ಅರ್ಡೆಮ್ ಅವರು ‘ಲಸಿಕಾ ಅಭಿಯಾನ‘ ಕುರಿತು ವೆಲ್ಲಿಂಗ್ಟನ್‌ನ ಲಸಿಕಾ ಕೇಂದ್ರಗಳಲ್ಲಿನ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಈ ಕಾರ್ಯಕ್ರಮದ ಆರಂಭದಲ್ಲಿ 1 ಲಕ್ಷ ಡೋಸ್‌ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ನಂತರ ಅದನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT