ಶನಿವಾರ, ಆಗಸ್ಟ್ 20, 2022
22 °C

ನೀರವ್‌ ಮೋದಿ ಹಸ್ತಾಂತರ ಪ್ರಕರಣದ ವಿಚಾರಣೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ಎರಡನೇ ಹಂತದ ಐದು ದಿನಗಳ ವಿಚಾರಣೆಯು ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 49 ವರ್ಷ ವಯಸ್ಸಿನ ನೀರವ್‌ ಅವರನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಕಪ್ಪು ವರ್ಣದ ಸೂಟ್‌ ಧರಿಸಿದ್ದ ನೀರವ್,‌ ವಿಡಿಯೊ ಲಿಂಕ್‌ ಮೂಲಕ ವೆಸ್ಟ್‌ಮಿನ್‌ಸ್ಟರ್‌‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರಾದರು.

ಲಾಕ್‌ಡೌನ್‌ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಸೌತ್‌ ವೆಸ್ಟ್‌ ಲಂಡನ್‌ನಲ್ಲಿರುವ ವಾಂಡ್ಸ್‌ವರ್ಥ್‌ ಕಾರಾಗೃಹದಿಂದಲೇ ವಿಚಾರಣೆಗೆ ಹಾಜರಾಗಲು ನೀರವ್‌ಗೆ ನ್ಯಾಯಾಧೀಶ ಸ್ಯಾಮುಯೆಲ್‌ ಗೂಜೀ ಅವರು ಅನುಮತಿ ನೀಡಿದ್ದಾರೆ.

ಸೋಮವಾರದ ವಿಚಾರಣೆ ವೇಳೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಹಾಜರಿದ್ದರು. 

ಭಾರತ ಸರ್ಕಾರವು ನೀರವ್‌ ಮೇಲಿನ ಆರೋಪಗಳನ್ನು ದೃಢೀಕರಿಸಲು ಅಗತ್ಯವಿರುವ ಹೆಚ್ಚುವರಿ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೀಗಾಗಿ ಈ ವಾರದ ವಿಚಾರಣೆಯು ಮಹತ್ವ ಪಡೆದುಕೊಂಡಿದೆ.

ನೀರವ್‌ ಅವರ ಮೊದಲ ಹಂತದ ವಿಚಾರಣೆ ಮೇ ತಿಂಗಳಲ್ಲಿ ನಡೆದಿತ್ತು. ನವೆಂಬರ್ 3ರಂದು ಮೂರನೇ ಹಾಗೂ ಡಿಸೆಂಬರ್‌ನಲ್ಲಿ ಅಂತಿಮ ಹಂತದ ವಿಚಾರಣೆಗಳು ನಿಗದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು