ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಷ್ಯಾದ ಸೇನಾ ಉಪಕರಣ, ಬಿಡಿಭಾಗ ಪೂರೈಕೆಯಲ್ಲಿ ಅಡ್ಡಿ ಆಗಲಿಲ್ಲ’

Last Updated 28 ಸೆಪ್ಟೆಂಬರ್ 2022, 16:05 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ‘ಉಕ್ರೇನ್‌ ಯುದ್ಧದ ನಂತರವೂ ರಷ್ಯಾದಿಂದ ಈ ಹಿಂದೆ ಪಡೆದ ಸೇನಾ ಉಪಕರಣಗಳ ಸೇವೆ ಮತ್ತು ಬಿಡಿಭಾಗಗಳ ಪೂರೈಕೆಯಲ್ಲಿ ಯಾವುದೇ ಅಡಚಣೆಗಳನ್ನು ಎದುರಿಸಲಿಲ್ಲ. ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುವುದು ನಮ್ಮ ಆಯ್ಕೆ, ಇದು ರಾಷ್ಟ್ರೀಯ ಹಿತಾಸಕ್ತಿ ಎನ್ನುವ ನಂಬಿಕೆ ನಮ್ಮದು’ ಎಂದುಭಾರತ ಪ್ರತಿಪಾದಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರೊಂದಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ರಷ್ಯಾದಿಂದ ಈ ಹಿಂದೆ ಪಡೆದ ಸೇನಾ ಉಪಕರಣಗಳ ಸೇವೆ ಮತ್ತು ಬಿಡಿಭಾಗಗಳ ಪೂರೈಕೆಯ ವಿಷಯದಲ್ಲಿ ನಾವುಇತ್ತೀಚಿನ ತಿಂಗಳುಗಳಲ್ಲಿ ಯಾವುದೇ ನಿರ್ದಿಷ್ಟ ಸಮಸ್ಯೆಗಳನ್ನು ಎದುರಿಸಿದ್ದೇವೆ ಎಂದು ನಾನು ಭಾವಿಸಲಾರೆ’ ಎಂದು ಜೈಶಂಕರ್ ಅವರುಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಷ್ಯಾದ ಉದ್ಯಮಗಳ ಮೇಲೆ ನಿರ್ಬಂಧಗಳಿರುವಾಗ ಸೇನಾ ಯಂತ್ರಾಂಶ ಮತ್ತು ಉಪಕರಣಗಳ ಖರೀದಿಗೆ ಭಾರತದ ಯೋಜನೆ ಏನಿದೆ?ಅಮೆರಿಕ ಅಥವಾ ಇಸ್ರೇಲ್‌ನ ಸೇನಾ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಎದುರು ನೋಡುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ, ‘ನಮ್ಮ ಸೇನಾ ಉಪಕರಣಗಳನ್ನು ಎಲ್ಲಿಂದ ಮತ್ತು ಯಾರಿಂದ ಪಡೆಯುತ್ತೇವೆ ಎನ್ನುವುದು ಸಮಸ್ಯೆಯಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಇದು ಹೊಸ ಸಮಸ್ಯೆ ಅಥವಾಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ನಿರ್ದಿಷ್ಟವಾಗಿ ಬದಲಾಯಿಸಿದ ಸಮಸ್ಯೆ’ಎಂದು ಜೈಶಂಕರ್ ಹೇಳಿದರು.

‘ಕಳೆದ 15 ವರ್ಷಗಳಲ್ಲಿ ಭಾರತವು ಅಮೆರಿಕದಿಂದ ಸಿ -17, ಸಿ -130, ಪಿ -8 ಯುದ್ಧ ವಿಮಾನಗಳು, ಅಪಾಚೆ ಹೆಲಿಕಾಪ್ಟರ್, ಚಿನೂಕ್ಸ್, ಹೋವಿಟ್ಜರ್‌ಗಳು, ಎಂ777 ಹೋವಿಟ್ಜರ್‌ಗಳು ಹೀಗೆಬಹಳಷ್ಟು ಸೇನಾ ಉಪಕರಣಗಳನ್ನು ಖರೀದಿಸಿದೆ. ಇತ್ತೀಚೆಗೆ ಫ್ರಾನ್ಸ್‌ನಿಂದರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದ್ದೇವೆ. ಅಲ್ಲದೇ ಇಸ್ರೇಲ್‌ನಿಂದಲೂ ಸೇನಾ ಉಪಕರಣಗಳನ್ನು ಖರೀದಿ ಮಾಡಿದ್ದೇವೆ. ಭಾರತವು ಶಸ್ತ್ರಾಸ್ತ್ರಗಳಿಗೆ ಬಹು ಮೂಲಗಳನ್ನು ಹೊಂದಿದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT