ಬುಧವಾರ, ಡಿಸೆಂಬರ್ 1, 2021
26 °C

DNP ರಸಾಯನವಿಜ್ಞಾನ: ಇಬ್ಬರು ವಿಜ್ಞಾನಿಗಳಿಗೆ ನೊಬೆಲ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹೋಮ್‌: 2021ನೇ ಸಾಲಿನ ರಸಾಯನವಿಜ್ಞಾನ ವಿಭಾಗದ ನೊಬೆಲ್‌ ಪ್ರಶಸ್ತಿಗೆ ವಿಜ್ಞಾನಿಗಳಾದ ಬೆಂಜಮಿನ್‌ ಲಿಸ್ಟ್‌ ಹಾಗೂ ಡೇವಿಡ್‌ ಮ್ಯಾಕ್‌ಮಿಲನ್‌ ಆಯ್ಕೆಯಾಗಿದ್ದಾರೆ.

ರಾಸಾಯನಿಕ ಪ್ರಕ್ರಿಯೆಗಳ ವೇಗವರ್ಧನೆಗೆ ಸಂಬಂಧಿಸಿ ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಇಬ್ಬರು ವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಸಮಿತಿ ಬುಧವಾರ ತಿಳಿಸಿದೆ.

ಬೆಂಜಮಿನ್ ಲಿಸ್ಟ್‌ ಅವರು ಜರ್ಮನಿಯ ಮ್ಯಾಕ್ಸ್‌ ಪ್ಲ್ಯಾಂಕ್ ಇನ್ಸ್‌ಟಿಟ್ಯೂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡೇವಿಡ್‌ ಮ್ಯಾಕ್‌ಮಿಲನ್‌ ಅವರು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಲಿಸ್ಟ್‌ ಹಾಗೂ ಮ್ಯಾಕ್‌ಮಿಲನ್‌ ಅವರು ಸ್ವತಂತ್ರವಾಗಿ ಈ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಜನರು ಇವರ ಸಂಶೋಧನೆಯ ಲಾಭವನ್ನು ಪಡೆಯುತ್ತಿದ್ದಾರೆ’ ಎಂದೂ ಸಮಿತಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.