ಮಂಗಳವಾರ, ಮೇ 24, 2022
26 °C

ಮತ್ತೊಂದು ಕ್ಷಿಪಣಿ ಪ್ರಯೋಗ ನಡೆಸಿದ ಉತ್ತರ ಕೊರಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಯೋಲ್: ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪ್ರಯೋಗ ನಡೆಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ.

ಇದು ಈ ತಿಂಗಳಲ್ಲಿ ಉತ್ತರ ಕೊರಿಯಾ ನಡೆಸಿದ 6ನೇ ಉಡಾವಣೆಯಾಗಿದ್ದು, ಅದು ಖಂಡಾಂತರ ಕ್ಷಿಪಣಿಯೇ ಮತ್ತು ಎಷ್ಟು ದೂರ ಕ್ರಮಿಸಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾ ಹೇಳಿದೆ.

ದೀರ್ಘಾವಧಿಯ ಪರಮಾಣು ಮಾತುಕತೆಗಳ ಮಧ್ಯೆ ಅಮೆರಿಕದ ಬೈಡನ್ ಆಡಳಿತದ ಮೇಲೆ ಒತ್ತಡ ಹೇರುವ ಸ್ಪಷ್ಟ ಪ್ರಯತ್ನದಲ್ಲಿ ಉತ್ತರ ಕೊರಿಯಾ ಇತ್ತೀಚೆಗೆ ತನ್ನ ಪರೀಕ್ಷಾ ಚಟುವಟಿಕೆಯನ್ನು ಹೆಚ್ಚಿಸಿದೆ.

ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಮೇಲೆ ಅಮೆರಿಕದ ನಿರ್ಬಂಧಗಳು ಮತ್ತು ಸರ್ಕಾರದ ದಶಕಗಳ ಅದಕ್ಷ ಆಡಳಿತದಿಂದಾಗಿ ದೇಶ ಜರ್ಜರಿತವಾಗಿದೆ. ಈ ಮಧ್ಯೆ, ಕೊರೊನಾ ಸಾಂಕ್ರಾಮಿಕ ರೋಗವು ಉತ್ತರ ಕೊರಿಯಾದ ಆರ್ಥಿಕತೆಯನ್ನು ಮತ್ತಷ್ಟು ಅಲುಗಾಡಿಸುತ್ತಿರುವುದರಿಂದ ಒತ್ತಡವು ಹೆಚ್ಚಾಗಿದೆ,

ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಸ್ಫೋಟಕಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳ ಪರೀಕ್ಷೆಯನ್ನು ಉತ್ತರ ಕೊರಿಯಾ ಪುನರಾರಂಭಿಸಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ 2018 ರಲ್ಲೇ ಅಮೆರಿಕ ಜೊತೆಗಿನ ರಾಜತಾಂತ್ರಿಕತೆ ಮಾತುಕತೆಯನ್ನು ಕಡಿದುಕೊಂಡಿದ್ದರು.

ಉತ್ತರ ಕೊರಿಯಾದ ಪ್ರಮುಖ ಮಿತ್ರ ಮತ್ತು ಆರ್ಥಿಕ ಜೀವನಾಡಿ ಚೀನಾದಲ್ಲಿ ಫೆಬ್ರವರಿ 4 ರಿಂದ ಪ್ರಾರಂಭವಾಗುವ ಚಳಿಗಾಲದ ಒಲಿಂಪಿಕ್ಸ್ ನಂತರ ಉತ್ತರ ಕೊರಿಯಾವು ಶಸ್ತ್ರಾಸ್ತ್ರ ಪ್ರದರ್ಶನಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು