ಬುಧವಾರ, ಮಾರ್ಚ್ 22, 2023
21 °C

ಅಮೆರಿಕಕ್ಕೆ ಅಪ್ಪಳಿಸಬಲ್ಲ ಸಾಮರ್ಥ್ಯವಿರುವ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಎಪಿ Updated:

ಅಕ್ಷರ ಗಾತ್ರ : | |

ಸೋಲ್: ಅಮೆರಿಕಕ್ಕೆ ಅಪ್ಪಳಿಸಬಲ್ಲ ಸಾಮರ್ಥ್ಯವಿರುವ ದೀರ್ಘ ಶ್ರೇಣಿಯ ಕ್ಷಿಪಣಿಯನ್ನು ಉತ್ತರ ಕೊರಿಯಾ ಶುಕ್ರವಾರ ಉಡಾಯಿಸಿದೆ ಎಂದು ಅದರ ನೆರೆರಾಷ್ಟ್ರಗಳು ಹೇಳಿವೆ.

ಉತ್ತರ ಕೊರೊಯಾವು ತನ್ನ ಪರೀಕ್ಷಾ ಚಟುವಟಿಕೆಗಳನ್ನು ಪುನರಾರಂಭಿಸಿದ ಒಂದು ದಿನದ ನಂತರ, ದಕ್ಷಿಣ ಕೊರಿಯಾ ಮತ್ತು ಜಪಾನ್ ಜೊತೆಗಿನ ಮೈತ್ರಿ ಗಟ್ಟಿಗೊಳಿಸುವ ಅಮೆರಿಕದ ಕ್ರಮಗಳ ವಿರುದ್ಧ ಕ್ಷಿಪಣಿ ಉಡಾವಣೆ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ಶುಕ್ರವಾರ ಬೆಳಿಗ್ಗೆ ಉತ್ತರ ಕೊರಿಯಾವು ಪೂರ್ವ ಕರಾವಳಿ ಕಡೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿರುವುದನ್ನು ಪತ್ತೆ ಮಾಡಿರುವುದಾಗಿ ದಕ್ಷಿಣ ಕೊರಿಯಾದ ಜಂಟಿ ಸೇನಾ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕೊರಿಯಾ ತನ್ನ ಪಶ್ಚಿಮ ಕರಾವಳಿ ಪ್ರದೇಶದಿಂದ ಐಸಿಬಿಎಂ-ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ ಎಂದು ಜಪಾನಿನ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಈ ಕ್ಷಿಪಣಿಯು ಉತ್ತರ ಕೊರಿಯಾ ಪೂರ್ವ ಕರಾವಳಿ ಉದ್ದಕ್ಕೂ ಸಂಚರಿಸಿದೆ.

ಬೆಳಿಗ್ಗೆ ಸುಮಾರು 10:14 ರ ಸುಮಾರಿಗೆ ಕ್ಷಿಪಣಿ ಉಡಾವಣೆಯಾಗಿದ್ದು, ಇನ್ನೂ ಹಾರಾಟದಲ್ಲಿದೆ ಮತ್ತು ಜಪಾನಿನ ವಿಶೇಷ ಆರ್ಥಿಕ ವಲಯದೊಳಗೆ ಅದು ಬೀಳಬಹುದು ಎಂದು ಅದು ಹೇಳಿದೆ.

ಎರಡು ವಾರಗಳಲ್ಲಿ ಇದು ಉತ್ತರ ಕೊರಿಯಾ ಉಡಾಯಿಸಿದ ಮೊದಲ ಐಸಿಬಿಎಂ ಕ್ಷಿಪಣಿ ಉಡಾವಣೆಯಾಗಿದೆ ಎಂದು ವರದಿ ತಿಳಿಸಿದೆ. ಆದರೆ, ನವೆಂಬರ್ 3ರಂದು ಉತ್ತರ ಕೊರಿಯಾ ಉಡಾಯಿಸಿದ್ದ ಖಂಡಾಂತರ ಕ್ಷಿಪಣಿ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ವಿಫಲವಾಗಿತ್ತು ಎಂದು ತಜ್ಞರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು