ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪತ್ತೆಯಾದ ಬಳಿಕ ಉತ್ತರ ಕೊರಿಯಾದಲ್ಲಿ 14.8 ಲಕ್ಷ ಮಂದಿಗೆ ಜ್ವರ

Last Updated 17 ಮೇ 2022, 11:44 IST
ಅಕ್ಷರ ಗಾತ್ರ

ಸೋಲ್‌(ದಕ್ಷಿಣ ಕೊರಿಯಾ): ಉತ್ತರ ಕೊರಿಯಾದಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ಬಳಿಕ ದೇಶದಲ್ಲಿ ಜ್ವರ ತೀವ್ರವಾಗಿ ಹರಡುತ್ತಿದ್ದು, 2,69,510ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಜ್ವರ ಕಾಣಿಸಿಕೊಂಡಿದೆ. ಆರು ಮಂದಿ ಮೃತಪಟ್ಟಿ‌ದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಏಪ್ರಿಲ್‌ನಿಂದ ದೇಶದಾದ್ಯಂತ ಜ್ವರವು ವೇಗವಾಗಿ ಹರಡುತ್ತಿದ್ದು, ಇದುವರೆಗೆ ದೇಶದಲ್ಲಿ 56 ಮಂದಿ ಮೃತಪಟ್ಟಿದ್ದಾರೆ. 14.8 ಲಕ್ಷ ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಬಹುಪಾಲು ಕೋವಿಡ್‌ಗೆ ತುತ್ತಾಗಿದ್ದಾರೆ ಎಂದು ವಿದೇಶಿ ತಜ್ಞರು ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ 6,63,910 ಮಂದಿಯನ್ನು ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಹೇಳಿರುವ ಕೊರಿಯಾದ ಸರ್ಕಾರಿ ಮಾಧ್ಯಮ, ಜ್ವರದಿಂದ ಬಳಲುತ್ತಿರುವವರಲ್ಲಿ ಎಷ್ಟು ಮಂದಿಗೆ ಕೋವಿಡ್‌ ದೃಢಪಟ್ಟಿದೆ ಎಂಬುದನ್ನು ಹೇಳಿಲ್ಲ. ಸೋಂಕು ಪತ್ತೆ ಪರೀಕ್ಷೆಗೆ ಅಗತ್ಯ ವೈದ್ಯಕೀಯ ಸಲಕರಣೆ ಇಲ್ಲದ ಕಾರಣ ಸೋಂಕಿನ ಲಕ್ಷಣ ಕಾಣಿಸಿಕೊಂಡವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ.

ದೇಶದಲ್ಲಿನ 2.6 ಕೋಟಿ ಮಂದಿ ಇನ್ನೂ ಲಸಿಕೆ ಪಡೆದಿಲ್ಲ. ಅಲ್ಲದೆ ಆರೋಗ್ಯ ವ್ಯವಸ್ಥೆಯೂ ಹದಗೆಟ್ಟಿದೆ. ಸೋಂಕು ನಿಯಂತ್ರಿಸದಿದ್ದರೆ, ಉತ್ತರ ಕೊರಿಯಾ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT