ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷಾ ಪ್ರಯೋಗ ಯಶಸ್ವಿ

Last Updated 29 ಸೆಪ್ಟೆಂಬರ್ 2021, 13:38 IST
ಅಕ್ಷರ ಗಾತ್ರ

ಸೋಲ್‌: ‘ಉತ್ತರ ಕೊರಿಯಾವು ಹೈಪರ್‌ಸಾನಿಕ್ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ’ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಉತ್ತರ ಕೊರಿಯಾವು ತನ್ನ ಪರಮಾಣು ಸಾಮರ್ಥ್ಯದ ಅಭಿವೃದ್ಧಿಗೆ ಅನುಗುಣವಾಗಿ ಈ ಕ್ಷಿಪಣಿಯನ್ನು ರೂಪಿಸಿದೆ. ಇದರಿಂದಾಗಿ ದೇಶದ ರಕ್ಷಣಾ ಸಾಮರ್ಥ್ಯವು ಸಾವಿರಪಟ್ಟು ಹೆಚ್ಚಾಗಲಿದ್ದು, ಮಿಲಿಟರಿ ಸಾಮರ್ಥ್ಯವನ್ನು ವಿಸ್ತರಿಸಿದಂತಾಗಿದೆ ಎಂದು ತಿಳಿಸಲಾಗಿದೆ.

ಮಂಗಳವಾರ ಆರಂಭವಾದ ಕ್ಷಿಪಣಿಯ ಪರೀಕ್ಷೆಯು ಈ ತಿಂಗಳಿನಲ್ಲಿ ಉತ್ತರ ಕೊರಿಯಾ ನಡೆಸಿರುವ ಮೂರನೇ ಸುತ್ತಿನ ಯಶಸ್ವಿ ಕ್ಷಿಪಣಿ ಪ್ರಯೋಗವಾಗಿದೆ. ಅಮೆರಿಕದ ಕ್ಷಿಪಣಿ ಸುರಕ್ಷಾ ವ್ಯವಸ್ಥೆಗೂ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಬೇಧಿಸುವುದು ಅಸಾಧ್ಯ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT