ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲೆ ಆಕ್ರಮಣ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಉತ್ತರ ಕೊರಿಯಾದ ಕಿಮ್ ಬೆಂಬಲ

Last Updated 12 ಜೂನ್ 2022, 6:28 IST
ಅಕ್ಷರ ಗಾತ್ರ

ಸೋಲ್: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಕಿಡಿಕಾರಿದೆ. ಆದಾಗ್ಯೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾನುವಾರ ಹೇಳಿದ್ದಾರೆ.

'ರಷ್ಯಾ ದಿನ'ವನ್ನು (ಜೂನ್‌ 12) ಉದ್ದೇಶಿಸಿ ಮಾತನಾಡಿರುವಕಿಮ್‌, 'ತಮ್ಮ ದೇಶದ ಘನತೆ ಹಾಗೂ ಭದ್ರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಎಲ್ಲ ರೀತಿಯಸವಾಲುಗಳು ಮತ್ತು ಕಷ್ಟಗಳನ್ನು ಧೈರ್ಯವಾಗಿ ಎದುರಿಸಿರುವ ರಷ್ಯನ್ನರು ದೊಡ್ಡ ಯಶಸ್ಸು ಗಳಿಸಿದ್ದಾರೆ. ಕೊರಿಯಾ ಜನರು ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ನೀಡಲಿದ್ದಾರೆ' ಎಂದು ಹೇಳಿರುವುದಾಗಿ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ 'ಕೊರಿಯಾ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ' (ಕೆಸಿಎನ್‌ಎ)ವರದಿ ಮಾಡಿದೆ.

ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಅಂತರರಾಷ್ಟ್ರೀಯ ನ್ಯಾಯವನ್ನು ರಕ್ಷಿಸುವ, ಜಾಗತಿಕ ಭದ್ರತೆಯನ್ನು ಖಾತ್ರಿಪಡಿಸುವ ಪ್ರಯಾಣದಲ್ಲಿ ಸ್ನೇಹ ಸಂಬಂಧ ಬಲಪಡಿಸುವುದನ್ನು ಮುಂದುವರಿಸಲಾಗುವುದು ಎಂದು ಕಿಮ್‌ ವಿಶ್ವಾಸ ವ್ಯಕ್ತಪಡಿಸಿರುವುದಾಗಿಯೂ ಕೆಸಿಎನ್‌ಎ ಹೇಳಿದೆ.

ರಷ್ಯಾದ ಭದ್ರತೆಯ ದೃಷ್ಟಿಯಿಂದಷ್ಟೇ ಉಕ್ರೇನ್‌ ಮೇಲೆ ಅಪ್ರಚೋದಿತ ದಾಳಿನಡೆಸಲಾಗಿದೆ ಎಂದು ಕಿಮ್‌ ಹೇಳಿದ್ದಾರೆ. ಇದು ರಷ್ಯಾ ಹಾಗೂ ಉತ್ತರ ಕೊರಿಯಾದ ನಿಕಟ ದ್ವಿಪಕ್ಷೀಯ ಸಂಬಂಧವನ್ನು ವಿವರಿಸುತ್ತದೆ ಎಂದು ದಕ್ಷಿಣ ಕೊರಿಯಾದ ಯೊನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT