ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣ; ಔಷಧ ಪೂರೈಕೆಗೆ ವಿಶೇಷ ಆದೇಶ ಹೊರಡಿಸಿದ ಕಿಮ್

Last Updated 16 ಮೇ 2022, 5:44 IST
ಅಕ್ಷರ ಗಾತ್ರ

ಸೋಲ್‌: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಏಕಾಏಕಿ ಏರಿಕೆಯಾಗುತ್ತಿದ್ದರೂ, ಅಧಿಕಾರಿಗಳು ಸಮರ್ಪಕವಾಗಿ ಔಷಧ ಪೂರೈಸಲು ವಿಫಲರಾಗಿದ್ದಾರೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ ಕಿಡಿಕಾರಿದ್ದಾರೆ. ಹಾಗೆಯೇ, ಔಷಧ ಸರಬರಾಜನ್ನು ಸದೃಢಗೊಳಿಸಲು ಸೇನಾ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಆದೇಶಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಆಡಳಿತದಲ್ಲಿರುವ 'ವರ್ಕರ್ಸ್‌ ಪಾರ್ಟಿ ಆಫ್‌ ಕೊರಿಯಾ'ದ ರಾಜಕೀಯ ವಿಭಾಗವುಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ತುರ್ತು ಸಮಾಲೋಚನಾ ಸಭೆಯನ್ನು ಭಾನುವಾರ ಕರೆದಿತ್ತು ಎಂದು ಕೊರಿಯಾ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ (ಕೆಸಿಎನ್‌ಎ) ವರದಿ ಮಾಡಿದೆ.

'ಮೀಸಲು ಔಷಧವನ್ನು ಕೂಡಲೇಬಿಡುಗಡೆ ಮಾಡಬೇಕು ಮತ್ತು ಸಮರ್ಪಕವಾಗಿ ವಿತರಿಸಬೇಕು' ಎಂದುಪಾಲಿಟ್‌ಬ್ಯೂರೊ ತುರ್ತು ಆದೇಶ ನೀಡಿದ್ದರೂ,ಔಷಧಾಲಯಗಳಿಗೆ ಸೂಕ್ತ ರೀತಿಯಲ್ಲಿ ಔಷಧ ಪೂರೈಕೆಯಾಗಿಲ್ಲ ಎಂದು ಸಭೆ ವೇಳೆ ಕಿಮ್‌ಅಸಮಾಧಾನ ವ್ಯಕ್ತಪಡಿಸಿರುವುದಾಗಿ 'ಯೋನ್‌ಹಾಪ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಳಿಕ ಅವರು, ಔಷಧ ಸರಬರಾಜು ಅಚಲವಾಗಿರಬೇಕು. ಅದಕ್ಕಾಗಿ ಸೇನಾ ವೈದ್ಯಕೀಯ ಸಿಬ್ಬಂದಿಯನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳುವಂತೆ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಿಗೆ ಕಿಮ್‌ ಆದೇಶಿಸಿದ್ದಾರೆ ಎಂದು ಕೆಸಿಎನ್‌ಎ ಉಲ್ಲೇಖಿಸಿದೆ.

ಉತ್ತರ ಕೊರಿಯಾದಲ್ಲಿ ಕೋವಿಡ್‌ನಿಂದಾಗಿ ಭಾನುವಾರ ಎಂಟು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 50ಕ್ಕೆ ಏರಿದೆ. ಒಂದೇ ದಿನ 3,92,920 ಜನರಲ್ಲಿ ಜ್ವರ ಕಾಣಿಸಿಕೊಂಡಿದೆ.

ಜ್ವರದ ಲಕ್ಷಣ ಕಾಣಿಸಿಕೊಂಡಿರುವವರ ಒಟ್ಟಾರೆ ಸಂಖ್ಯೆ 12 ಲಕ್ಷಕ್ಕೂ ಹೆಚ್ಚಾಗಿದ್ದು, ಈ ಪೈಕಿ 6.48 ಲಕ್ಷ ಜನರು ಸಂಪೂರ್ಣ ಗುಣಮುಖರಾಗಿದ್ದಾರೆ.

ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಮೇ 12ರಂದು ವರದಿಯಾಗಿದೆ ಎಂದು ಉತ್ತರ ಕೊರಿಯಾ ಖಚಿತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT