ಶನಿವಾರ, ಆಗಸ್ಟ್ 13, 2022
26 °C

ಉತ್ತರ ಕೊರಿಯಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರುತ್ತೇವೆ: ಕಿಮ್ ಜಾಂಗ್‌ ಉನ್

ಎ‍ಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್: ಉತ್ತರ ಕೊರಿಯಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವುದಾಗಿ ಅಧ್ಯಕ್ಷ ಕಿಮ್ ಜಾಂಗ್‌ ಉನ್ ಅವರು ಪ್ರತಿಜ್ಞೆ ಮಾಡಿದ್ದಾರೆ.

ಕಿಮ್ ಜಾಂಗ್‌ ಉನ್ ಅಧ್ಯಕ್ಷತೆಯಲ್ಲಿ ಆಡಳಿತಾರೂಢ ವರ್ಕರ್ಸ್‌ ಪಾರ್ಟಿಯ ಕೇಂದ್ರೀಯ ಸಮಿತಿ ಸಭೆಯಲ್ಲಿ ಕಿಮ್‌ ಈ ಹೇಳಿಕೆ ನೀಡಿದ್ದಾರೆ.

‘ಪಕ್ಷವು ಜತೆಯಾಗಿ ಆರ್ಥಿಕ ಬಿಕ್ಕಟ್ಟು ಎದುರಿಸಲಿದೆ. ಕ್ರಾಂತಿಯ ಹಾದಿಯಲ್ಲಿರುವ ತೊಂದರೆಗಳನ್ನು ನಾವು ಬಗೆಹರಿಸಲಿದ್ದೇವೆ ಎಂದು ಪಕ್ಷದ ಪರವಾಗಿ ಪ್ರತಿಜ್ಞೆ ಮಾಡುತ್ತೇನೆ’ ಎಂದು ಕಿಮ್ ಜಾಂಗ್‌ ಉನ್‌ ಹೇಳಿದ್ದಾರೆ.

ಆರ್ಥಿಕ ನಿರ್ವಹಣೆಯಲ್ಲಿ ಲೋಪಗಳು, ಸಾಂಕ್ರಾಮಿಕದಿಂದಾಗಿ ಮುಚ್ಚಲಾಗಿರುವ ಗಡಿಗಳು ಮತ್ತು ಅಮೆರಿಕ ಹೇರಿದ ನಿರ್ಬಂಧಗಳಿಂದಾಗಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು